ಕ್ರೀಡೆ

ಬೆಳ್ಳಿ ಪದಕ ವಿಜೇತ ರವಿಕುಮಾರ್ ದಹಿಯಾಗೆ 4 ಕೋಟಿ ನಗದು ಬಹುಮಾನ ಘೋಷಿಸಿದ ಹರಿಯಾಣ ಸರ್ಕಾರ

Vishwanath S

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಕೊರಳೇರಿಸಿಕೊಂಡ ಕುಸ್ತಿಪಟು ರವಿಕುಮಾರ್ ದಹಿಯಾಗೆ ಹರಿಯಾಣ ಸರ್ಕಾರ ಭಾರಿ ಬಹುಮಾನ ಘೋಷಿಸಿದೆ.  

ತಮ್ಮ ರಾಜ್ಯದವರಾದ ರವಿಕುಮಾರ್ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಸಂದರ್ಭದಲ್ಲಿ ಅವರಿಗೆ 4 ಕೋಟಿ ರೂಪಾಯಿ ನಗದು ಬಹುಮಾನ. ಕ್ಲಾಸ್‌ 1 ದರ್ಜೆಯ ಉದ್ಯೋಗ ನೀಡಲಾಗುವುದು ಸರ್ಕಾರ ಪ್ರಕಟಿಸಿದೆ.    

ರಾಜ್ಯದ ಯಾವುದೇ ಭಾಗದಲ್ಲಿ ಶೇ. 50ರಷ್ಟು ರಿಯಾಯಿತಿಯೊಂದಿಗೆ ಒಂದು ಪ್ಲಾಟ್ ನೀಡಲಾಗುವುದು ಎಂದು ಘೋಷಿಸಿದೆ. ಅಲ್ಲದೆ, ರವಿ ಅವರ ಗ್ರಾಮ ನಹ್ರಿಯಲ್ಲಿ ಕುಸ್ತಿ ತರಬೇತಿಗಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವುದಾಗಿ ಹರಿಯಾಣ ಸರ್ಕಾರ ಹೇಳಿದೆ.

ರಜತ ಪದಕ ವಿಜೇತ ರವಿ ಕುಮಾರ್ ದಹಿಯಾ ಅವರ ಸಾಧನೆಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ದಹಿಯಾ ಅವರ ಸಾಧನೆ ನೋಡಿ ದೇಶ ಹೆಮ್ಮೆಪಡುತ್ತಿದೆ ಎಂದು ಕೊಂಡಾಡಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಪದಕ  ಗೆದ್ದು ತಂದ ನಿಜವಾದ ಚಾಂಪಿಯನ್ ಆಗಿದ್ದೀರಿ ಎಂದು ರಾಷ್ಟ್ರಪತಿ ಕೊಂಡಾಡಿದ್ದಾರೆ.

ರವಿಕುಮಾರ್ ದಹಿಯಾ ಅದ್ಭುತ ಕುಸ್ತಿಪಟು ಎಂದು ಪ್ರಧಾನಿ ಕೊಂಡಾಡಿದ್ದು, ಅವರ  ಸ್ಫೂರ್ತಿದಾಯಕ ಪ್ರದರ್ಶನ   ಮಹತ್ವದ್ದು ಎಂದು ಉಲ್ಲೇಖಿಸಿದ್ದಾರೆ. ಬೆಳ್ಳಿ ಗೆದ್ದ ರವಿ ಅವರಿಗೆ ಸೆಲೆಬ್ರಿಟಿಗಳು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.

SCROLL FOR NEXT