ಕ್ರೀಡೆ

ಕಣ್ಣೀರಿಡುತ್ತಲೇ ಬಾರ್ಸಿಲೋನಾ ತಂಡಕ್ಕೆ ಗುಡ್ ಬೈ ಹೇಳಿದ ಲಯೊನೆಲ್ ಮೆಸ್ಸಿ-ವಿಡಿಯೋ

Nagaraja AB

ಬಾರ್ಸಿಲೋನಾ: ಅರ್ಜೆಂಟಿನಾದ ಹಿರಿಯ ಫುಟ್ಬಾಲ್  ಆಟಗಾರ ಲಿಯೊನೆಲ್ ಮೆಸ್ಸಿ, 21 ವರ್ಷಗಳ ನಂತರ ಬಾರ್ಸಿಲೋನಾ ತಂಡವನ್ನು ತೊರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಕಣ್ಣೀರುಡುತ್ತಲೇ  ಈ ವಿಷಯವನ್ನು ಅವರು ತಿಳಿಸಿದರು.

ಇದು ತುಂಬಾ ಕಷ್ಟಕರವಾಗಿದೆ. ಇದಕ್ಕೆ ನಾನು ಸಿದ್ಧ ಆಗಿರಲಿಲ್ಲ. ಕಳೆದ ವರ್ಷ ತಂಡ ಬಿಡದಂತೆ ಮನವೊಲಿಸಲಾಗಿತ್ತು. ಆದರೆ, ಈ ವರ್ಷ ನಾವು, ನನ್ನ ಕುಟುಂಬ, ನಮ್ಮ ಮನೆಯಲ್ಲಿಯೇ ಮುಂದುವರೆಯಲು ಬಯಸಿರುವುದಾಗಿ ತಿಳಿಸಿದರು.

ಇಂದು ಬಾರ್ಸಿಲೋನಾ ತಂಡಕ್ಕೆ ಗುಡ್ ಬೈ ಹೇಳುತ್ತಿದ್ದೇನೆ. 13 ವರ್ಷದವನಾಗಿದ್ದಾಗ ತಂಡ ಸೇರಿಕೊಂಡಿದ್ದೆ, 21 ವರ್ಷಗಳ ನಂತರ ನನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ವಾಸಿಸುತ್ತಿರುವುದಾಗಿ ಅವರು ಹೇಳಿದರು. ಭವಿಷ್ಯದ ಬಗ್ಗೆ ಇನ್ನೂ ನಿರ್ಧರಿಸಿಲ್ಲ, ಇಷ್ಟು ವರ್ಷಗಳ ಕಾಲ ನನಗೆ ಪ್ರೀತಿ ತೋರಿಸಿದ ಜನರಿಗೆ ಕೃತಜ್ಞನಾಗಿರುವುದಾಗಿ ಮೆಸ್ಸಿ ತಿಳಿಸಿದರು. 

ಮೆಸ್ಸಿ ಬಾರ್ಸಿಲೋನಾ ತಂಡವನ್ನು ತೊರೆಯಲಿದ್ದಾರೆ ಎಂದು ಕಳೆದ ವಾರ ಸುದ್ದಿಯಾಗಿತ್ತು.  ಕ್ಲಬ್ ಪ್ರಕಾರ ಹಣಕಾಸು ಹಾಗೂ ರಚನಾತ್ಮಾಕ ಅಡೆತಡೆಗಳು ಇದರ ಹಿಂದಿರುವ ಕಾರಣ ಎನ್ನಲಾಗಿದೆ. 

SCROLL FOR NEXT