ಕ್ರೀಡೆ

ಟೋಕಿಯೊ ಒಲಂಪಿಕ್ಸ್‌ನಲ್ಲಿ ಪದಕ ಮಿಸ್ ಮಾಡಿಕೊಂಡ 20 ಆಟಗಾರರಿಗೆ ತಲಾ 11 ಲಕ್ಷ ರೂ. ಘೋಷಿಸಿದ ಮ್ಯಾನ್‌ಕೈಂಡ್ ಫಾರ್ಮಾ

Lingaraj Badiger

ನವದೆಹಲಿ: ಇತ್ತೀಚೆಗೆ ನಡೆದ ಟೋಕಿಯೊ ಒಲಂಪಿಕ್ಸ್‌ನಲ್ಲಿ ಪದಕಗಳನ್ನು ಮಿಸ್ ಮಾಡಿಕೊಂಡ 20 ಭಾರತೀಯ ಆಟಗಾರರನ್ನು ಅಭಿನಂದಿಸಲು ನಿರ್ಧರಿಸಲಾಗಿದೆ ಮತ್ತು ಅವರ ದೃಢ ನಿರ್ಧಾರ ಮತ್ತು ಕಠಿಣ ಪರಿಶ್ರಮವನ್ನು ಪ್ರೋತ್ಸಾಹಿಸಲು ಪ್ರತಿಯೊಬ್ಬರಿಗೂ 11 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಡ್ರಗ್ ಸಂಸ್ಥೆ ಮ್ಯಾನ್‌ಕೈಂಡ್ ಫಾರ್ಮಾ ಹೇಳಿದೆ.

ಕಂಪನಿಯು ಕ್ರೀಡಾಪಟುಗಳು ಎದುರಿಸುತ್ತಿರುವ ಕಷ್ಟಗಳನ್ನು ಅರ್ಥಮಾಡಿಕೊಂಡಿದೆ ಮತ್ತು ಆಟಗಾರರ ಮನೋಭಾವವನ್ನು ಪ್ರಶಂಸಿಸಲು ಮುಂದೆ ಬಂದಿದೆ ಎಂದು ಮ್ಯಾನ್ ಕೈಂಡ್  ಫಾರ್ಮಾ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಿಳಾ ಹಾಕಿ ತಂಡದ ಪ್ರತಿ ಆಟಗಾರ್ತಿ, ಒಟ್ಟು 16 ಆಟಗಾರ್ತಿಯರಿಗೆ ತಲಾ 11 ಲಕ್ಷ ರೂ., ಬಾಕ್ಸರ್ ಸತೀಶ್ ಕುಮಾರ್, ಕುಸ್ತಿಪಟು ದೀಪಕ್ ಪುನಿಯಾ, ಶೂಟರ್ ಸೌರಭ್ ಚೌಧರಿ ಮತ್ತು ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರಿಗೂ ತಲಾ 11 ಲಕ್ಷ ರೂ. ನೀಡಲಾಗವುದು ಎಂದು ಕಂಪನಿ ತಿಳಿಸಿದೆ.

"ಪ್ರತಿ ಕ್ರೀಡೆಯಲ್ಲಿಯೂ ಗೆಲುವು ಮುಖ್ಯವಲ್ಲ ಎಂದು ನಾವು ನಂಬುತ್ತೇವೆ, ಪ್ರಯತ್ನಗಳನ್ನು ಪರಿಗಣಿಸಲಾಗುತ್ತದೆ ಮತ್ತು ನಮ್ಮ ದೇಶವನ್ನು ಪ್ರತಿನಿಧಿಸುವಾಗ ನಮ್ಮ ಆಟಗಾರರು ತುಂಬಾ ಶ್ರಮಿಸಿದ್ದಾರೆ. ಅವರು ಅನುಭವಿಸಿದ ಕಷ್ಟಗಳು ಮತ್ತು ತ್ಯಾಗಗಳನ್ನು
ನಾವು ಪ್ರಶಂಸಿಸಲು ಬಯಸುತ್ತೇವೆ." ಎಂದು ಮ್ಯಾನ್ ಕೈಂಡ್ ಫಾರ್ಮಾ ಉಪಾಧ್ಯಕ್ಷ ಮತ್ತು ಎಂಡಿ ರಾಜೀವ್ ಜುನೇಜಾ ಅವರು ಹೇಳಿದ್ದಾರೆ.

SCROLL FOR NEXT