ಕ್ರೀಡೆ

ಜಾಗತಿಕ ಶ್ರೇಯಾಂಕದಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ 2ನೇ ಸ್ಥಾನಕ್ಕೆ ಏರಿಕೆ

Srinivas Rao BV

ನವದೆಹಲಿ: ಒಲಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಒಲಂಪಿಕ್ಸ್ ಕ್ರೀಡಾಕೂಟದ ಬಳಿಕ ಜಾಗತಿಕ ಶ್ರೇಣಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. 

ಕ್ರೀಡಾಕೂಟದ ಬಳಿಕ ನೀರಜ್ ಚೋಪ್ರಾ ಒಂದೇ ಬಾರಿಗೆ 14 ಸ್ಥಾನಗಳ ಸುಧಾರಣೆ ಕಂಡಿದ್ದಾರೆ. ಆ.07 ರಂದು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದರು.  

ವಿಶ್ವ ಅಥ್ಲೆಟಿಕ್ಸ್ ನ ಅಂಕ ಪಟ್ಟಿಯಲ್ಲಿ 23 ವರ್ಷದ ಭಾರತದ ಅಥ್ಲೀಟ್ 1396 ಅಂಕಗಳನ್ನು ಹೊಂದಿದ್ದ ಜರ್ಮನಿಯ ಅಥ್ಲೀಟ್ ಜೋಹಾನ್ಸ್ ವೆಟರ್ ಅವರ ಹಿಂದಿದ್ದಾರೆ. 

ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ 1315 ಅಂಕಗಳನ್ನು ಹೊಂದಿದ್ದಾರೆ ನೀರಜ್ ಚೋಪ್ರ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನೀರಜ್ ಚೋಪ್ರಾ ಅವರ ಅನುಯಾಯಿಗಳ ಸಂಖ್ಯೆ 143,000 ರಿಂದ 3.2 ಮಿಲಿಯನ್ ಗೆ ಏರಿಕೆಯಾಗಿದೆ.

SCROLL FOR NEXT