ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪಿ.ವಿ. ಸಿಂಧು ಜೊತೆ ಐಸ್ ಕ್ರೀಂ ಸವಿದು ಮಾತು ಉಳಿಸಿಕೊಂಡ ಪ್ರಧಾನಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ಎರಡು ಬಾರಿ ಒಲಂಪಿಕ್ಸ್ ಪದಕ ವಿಜೇತೆ ಪಿ. ವಿ. ಸಿಂಧು ಜೊತೆಗೆ ಐಸ್ ಕ್ರೀಂ ಸವಿದು ಮಾತು ಉಳಿಸಿಕೊಂಡರು.

ಪಿ. ವಿ. ಸಿಂಧು ಜೊತೆಗೆ ಐಸ್ ಕ್ರೀಂ ಸವಿಯುತ್ತಿರುವ ಪ್ರಧಾನಿ ಮೋದಿ
Nagaraja AB
Updated On : 16 Aug 2021, 2:44 pm

ನವದೆಹಲಿ: ಟೊಕಿಯೋ ಒಲಂಪಿಕ್ಸ್ ನಿಂದ ಹಿಂತಿರುಗಿದ ಬಳಿಕ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಜೊತೆಗೆ ಒಮ್ಮೆ ಐಸ್ ಕ್ರೀಂ ತಿನ್ನುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಾತು ನೀಡಿದ್ದರು. ಆ ಮಾತಿನಂತೆ ಸೋಮವಾರ ತಮ್ಮ ನಿವಾಸದಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಆತಿಥ್ಯ ನೀಡಿದ ಪ್ರಧಾನಿ ಮೋದಿ, ಎರಡು ಬಾರಿ ಒಲಂಪಿಕ್ಸ್ ಪದಕ ವಿಜೇತೆ ಪಿ. ವಿ. ಸಿಂಧು ಜೊತೆಗೆ ಐಸ್ ಕ್ರೀಂ ಸವಿದು ಮಾತು ಉಳಿಸಿಕೊಂಡರು. 

ಟೋಕಿಯೊ ಒಲಂಪಿಕ್ಸ್  ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಎಂದು ಕ್ರೀಡಾಪಟುಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಅಭಿನಂದಿಸುವ ಮೂಲಕ ಅವರ ಸಾಧನೆಯನ್ನು ಮನಸಾರೆ ಕೊಂಡಾಡಿದರು. ಜುಲೈ ತಿಂಗಳಲ್ಲಿ ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ತೆರಳುತ್ತಿದ್ದ ಕ್ರೀಡಾಪಟುಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದ ಪ್ರಧಾನಿ, ರಿಯೋ ಒಲಂಪಿಕ್ಸ್ ಮೊದಲು ಪಿವಿ ಸಿಂಧು ಜೊತೆ ಐಸ್ ಕ್ರೀಂ ತಿನ್ನುವುದನ್ನು ಏಕೆ ತಡೆಹಿಡಿಯಲಾಗಿತ್ತು ಎಂಬುದನ್ನು ಹೇಳಿದ್ದ ಮೋದಿ, ಈ ಬಾರಿಯೂ ಅದೇ ರೀತಿಯ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದರು. 

ಶ್ರಮ ಪಟ್ಟು ಆಟವಾಡಿ, ನೀವು ಮತ್ತೊಮ್ಮೆ ಯಶಸ್ವಿಯಾಗುತ್ತೀರಿ ಎಂಬ ವಿಶ್ವಾಸ ನನಗಿದ್ದು, ನೀವೆಲ್ಲರೂ ಒಲಿಂಪಿಕ್ಸ್‌ನಿಂದ ಹಿಂತಿರುಗಿದಾಗ, ನಿಮ್ಮೊಂದಿಗೆ ಐಸ್ ಕ್ರೀಂ ಸೇವಿಸುವುದಾಗಿ ಮೋದಿ ಹೇಳಿದ್ದರು. ಅದೇ ರೀತಿಯಾಗಿ ಸೋಮವಾರ ಅವರೊಂದಿಗೆ ಐಸ್ ಕ್ರೀಂ ಸವಿದು ಅಭಿನಂದಿಸಿದರು. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement