ನೈರೋಬಿಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಅಂಡರ್20 ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಭಾರತದ ಶೈಲಿ ಸಿಂಗ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಕೇವಲ 0.01 ಮೀಟರ್ ಅಂತರದಲ್ಲಿ ಶೈಲಿ ಸಿಂಗ್ ಚಿನ್ನ ಪದಕ ವಂಚಿತರಾದರು. ಸ್ವೀಡನ್‌ನ ಮಜಾ ಅಸ್ಕಾಗ್ 6.60 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದಿಂದ ಚಿನ್ನ ಗೆದ್ದಿದ್ದಾರೆ. ಉಕ್ರೇನ್ ನ ಮಾರಿಯಾ ಹೋರಿಲೋವಾ ಕಂಚಿನ ಪದಕ ಪಡೆದರು.
U20 ಚಾಂಪಿಯನ್‌ಶಿಪ್‌ನ ಈ ವರ್ಷದ ಆವೃತ್ತಿಯಲ್ಲಿ ಇದು ಭಾರತದ ಎರಡನೇ ಬೆಳ್ಳಿ ಪದಕ ಸೇರಿ ಒಟ್ಟಾರೆ ಮೂರನೇ ಪದಕ ಗೆದ್ದಿದೆ.