ಕಿಡಂಬಿ ಶ್ರೀಕಾಂತ್ 
ಕ್ರೀಡೆ

BWF ವಿಶ್ವ ಚಾಂಪಿಯನ್‌ಶಿಪ್ ಫೈನಲ್: ಭಾರತದ ಕಿಡಂಬಿ ಶ್ರೀಕಾಂತ್ ಗೆ ಸೋಲು, ಬೆಳ್ಳಿಗೆ ತೃಪ್ತಿ!

ವಿಶ್ವ ಚಾಂಪಿಯನ್‌ಶಿಪ್ ಟೈಟಲ್‌ ಮುಡಿಗೇರಿಸಿಕೊಳ್ಳುವ ಸುವರ್ಣಾವಕಾಶವನ್ನು ಭಾರತದ ಕಿಡಂಬಿ ಶ್ರೀಕಾಂತ್ ಅವರು ಸ್ವಲ್ಪದರಲ್ಲಿ ಕಳೆದುಕೊಂಡಿದ್ದಾರೆ. 

ಹುಯೆಲ್ವಾ(ಸ್ಪೇನ್): ವಿಶ್ವ ಚಾಂಪಿಯನ್‌ಶಿಪ್ ಟೈಟಲ್‌ ಮುಡಿಗೇರಿಸಿಕೊಳ್ಳುವ ಸುವರ್ಣಾವಕಾಶವನ್ನು ಭಾರತದ ಕಿಡಂಬಿ ಶ್ರೀಕಾಂತ್ ಅವರು ಸ್ವಲ್ಪದರಲ್ಲಿ ಕಳೆದುಕೊಂಡಿದ್ದಾರೆ. 

ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ 22ನೇ ಶ್ರೇಯಾಂಕದ ಆಟಗಾರ ಸಿಂಗಾಪುರದ ಲೊ ಕಿಯೊನ್ ಯೊ ಎದುರು 15-21, 20-22 ನೇರ ಸೆಟ್ ಗಳಿಂದ ಕಿಡಂಬಿ ಪರಾಭವಗೊಂಡರು. 

42 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 15ನೇ ಶ್ರೇಯಾಂಕದ ಶ್ರೀಕಾಂತ್ ಭಾರಿ ಹೋರಾಟ ನಡೆಸಿದರಾದರೂ ನಿರ್ಣಾಯಕ ಕ್ಷಣಗಳಲ್ಲಿ ಎದುರಾಳಿ ಮೇಲುಗೈ ಸಾಧಿಸಿದರು. ಇದರಿಂದ ಶ್ರೀಕಾಂತ್ ರಜತ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. 

ವೃತ್ತಿ ಜೀವನದ ಮೊದಲ ಪ್ರಶಸ್ತಿಯನ್ನು ಕಿಯೋನ್ ಗೆದ್ದುಕೊಂಡರು. ಈ ಸಾಧನೆ ಮಾಡಿದ ಮೊದಲ ಸಿಂಗಾಪುರದ ಶಟ್ಲರ್ ಎಂಬ ಇತಿಹಾಸ ನಿರ್ಮಿಸಿದರು.

ಆದರೆ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದಿಂದ ಚಿನ್ನ ಗೆದ್ದ ಏಕೈಕ ಭಾರತೀಯ ಆಟಗಾರ್ತಿ ಪಿವಿ ಸಿಂಧು. ಈ ಟೂರ್ನಿಯಲ್ಲಿ ಸತತ ಎರಡು ಬಾರಿ ಬೆಳ್ಳಿ ಗೆದ್ದಿರುವ ಸಿಂಧು, 2019ರಲ್ಲಿ ವಿಜೇತೆಯಾಗಿ ಇತಿಹಾಸ ನಿರ್ಮಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

E20 Petrol: ವೈಜ್ಞಾನಿಕ ಪರೀಕ್ಷೆಗಳಲ್ಲಿ ಸುರಕ್ಷಿತ, ವಾಹನಗಳಿಗೆ ಅತ್ಯುತ್ತಮ; ತಜ್ಞರ ಸಮರ್ಥನೆ

ಮೆಲ್ಬೋರ್ನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ; ಆಸ್ಟ್ರೇಲಿಯಾದಿಂದ ತನಿಖೆ

Cricket: ಸಚಿನ್ ಅಲ್ಲ.. ಸೂರ್ಯವಂಶಿ ಅಲ್ಲವೇ ಅಲ್ಲ.. ಐತಿಹಾಸಿಕ ಪದಾರ್ಪಣೆ ಹೊರತಾಗಿಯೂ ಈ ಆಟಗಾರನ ದಾಖಲೆ ಮುರಿಯುವಲ್ಲಿ ವಿಫಲ!

2nd T20I: Debut ಪಂದ್ಯದಲ್ಲೇ Vaibhav Sooryavanshi ಝಲಕ್, ಇಂಗ್ಲೆಂಡ್ ಗೆ ಗೆಲ್ಲಲು 191 ರನ್ ಸವಾಲಿನ ಗುರಿ ನೀಡಿದ ಭಾರತ!