ಕಿಡಂಬಿ ಶ್ರೀಕಾಂತ್ 
ಕ್ರೀಡೆ

ರಾಜೀವ್‌ ಖೇಲ್ ರತ್ನ ಪ್ರಶಸ್ತಿಗೆ ಕಿಡಂಬಿ ಶ್ರೀಕಾಂತ್, ಸಾಯಿ ಪ್ರಣೀತ್ ಹೆಸರು ಶಿಫಾರಸ್ಸು

ಭಾರತದ ಅತ್ಯುನ್ನತ ಕ್ರೀಡಾ ಪುರಸ್ಕಾರವಾಗಿರುವ 'ರಾಜೀವ್ ಖೇಲ್ ರತ್ನ' ಪ್ರಶಸ್ತಿಗೆ ಸ್ಟಾರ್ ಶಟ್ಲರ್‌ಗಳಾದ ಕಿಡಂಬಿ ಶ್ರೀಕಾಂತ್ ಹಾಗೂ ಸಾಯಿ ಪ್ರಣೀತ್ ಅವರ ಹೆಸರುಗಳನ್ನು ಬಿಎಐ ನಾಮನಿರ್ದೇಶನ ಮಾಡಿದೆ. 

ನವದೆಹಲಿ: ಭಾರತದ ಅತ್ಯುನ್ನತ ಕ್ರೀಡಾ ಪುರಸ್ಕಾರವಾಗಿರುವ 'ರಾಜೀವ್ ಖೇಲ್ ರತ್ನ' ಪ್ರಶಸ್ತಿಗೆ ಸ್ಟಾರ್ ಶಟ್ಲರ್‌ಗಳಾದ ಕಿಡಂಬಿ ಶ್ರೀಕಾಂತ್ ಹಾಗೂ ಸಾಯಿ ಪ್ರಣೀತ್ ಅವರ ಹೆಸರುಗಳನ್ನು ಬ್ಯಾಡ್ಮಿಂಟನ್ ಅಸೋಸಿಯೇಷನ್ ​​ಆಫ್ ಇಂಡಿಯಾ(ಬಿಎಐ) ನಾಮನಿರ್ದೇಶನ ಮಾಡಿದೆ. 

ಇನ್ನೂ ಮೂವರು ಶಟ್ಲರ್‌ಗಳ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ. ಎಚ್‌ಎಸ್ ಪ್ರಣವ್, ಪ್ರಣವ್ ಜೆರ್ರಿ ಚೋಪ್ರಾ, ಸಮೀರ್ ವರ್ಮಾ ಅವರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಳಿಸಿದೆ. 

ದ್ರೋಣಾಚಾರ್ಯ ಪ್ರಶಸ್ತಿಗೆ ಎಸ್.‌ ಮುರಳೀಧರನ್, ಪಿ.ಯೂ. ಭಾಸ್ಕರನ್‌ ಹೆಸರುಗಳನ್ನು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿದೆ. ಈ ಪೈಕಿ ಮುರಳೀಧರನ್‌ ಈಗಾಗಲೇ ದ್ರೋಣಾಚಾರ್ಯ ಜೀವಮಾನ ಸಾಧನೆ ಪ್ರಶಸ್ತಿ  ಪಡೆದುಕೊಂಡಿದ್ದಾರೆ.

ಏತನ್ಮಧ್ಯೆ, 2019 ರ ವಿಶ್ವ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದ ಸಾಯಿ ಪ್ರಣೀತ್, ಮುಂಬರುವ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅರ್ಹತೆ ಪಡೆದ ಏಕೈಕ ಆಟಗಾರರಾಗಿದ್ದಾರೆ. ಇನ್ನೂ ಕಿಡಂಬಿ ಶ್ರೀಕಾಂತ್ ಅವರ ವಿಷಯದಲ್ಲಿ, ಈ ಸ್ಟಾರ್ ಶಟ್ಲರ್ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಫಾಮ್‌ ಇಲ್ಲದೆ ಹೋರಾಡುತ್ತಿದ್ದಾರೆ. ಈ ಕ್ರಮವಾಗಿ ಅವರು ಟೋಕಿಯೊಗೆ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಕಿಡಂಬಿ ಶ್ರೀಕಾಂತ್ ಕೊನೆಯ ಬಾರಿಗೆ 2017 ರಲ್ಲಿ ನಾಲ್ಕು ಟೈಟಲ್‌ ಗೆದ್ದಿದ್ದಾರೆ. ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್, ರವಿಚಂದ್ರನ್ ಅಶ್ವಿನ್, ಬಿಲ್ಲುಗಾರಿಕೆಯಲ್ಲಿ ವನ್ನೆಮ್ ಜ್ಯೋತಿ ಸುರೇಖಾ, ಫುಟ್‌ಬಾಲ್‌ನಲ್ಲಿ ಸುನಿಲ್ ಛೇತ್ರಿ, ಟಿಟಿಯಲ್ಲಿ ಶರತ್ ಕಮಲ್, ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮೆ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್