ಕ್ರೀಡೆ

ಯುಎಸ್ ಗಾಲ್ಫ್ ಟೂರ್ನಿ‌: ಭಾರತದ ಅದಿತಿ ಅಶೋಕ್ ಗೆ ವೃತ್ತಿ ಶ್ರೇಷ್ಠ ಮೂರನೇ ಸ್ಥಾನ

Srinivasamurthy VN

ಮಿಚಿಗನ್: ಭಾರತದ ಉದಯೋನ್ಮುಖ ಗಾಲ್ಫರ್ ಅದಿತಿ ಅಶೋಕ್ ಅವರು ಅಮೆರಿಕದ ಗಾಲ್ಫ್ ಟೂರ್ನಿಯಲ್ಲಿ ವೃತ್ತಿ ಶ್ರೇಷ್ಠ ಮೂರನೇ ಸ್ಥಾನ ಪಡೆದಿದ್ದಾರೆ. 

ಅಮೆರಿಕದ ಮಿಚಿಗನ್ ನ ಮಿಡ್ ಲ್ಯಾಂಡ್ ನಲ್ಲಿರುವ ಡೋ ಗ್ರೇಟ್ ಲೇಕ್ಸ್ ಬೇ ಇನ್ವಿಟೇಶನಲ್ ಗಾಲ್ಫ್ ಟೂರ್ನಿಯಲ್ಲಿ ಥೈಲ್ಯಾಂಡ್ ನ ಪಜಾರಿ ಅನನ್ನರುಕರ್ನ್ ಜೊತೆ ಜಂಟಿ ಮೂರನೇ ಸ್ಥಾನ ಪಡೆದಿದ್ದಾರೆ. ಲೇಡೀಸ್ ಪ್ರೊಫೆಷನಲ್ ಗಾಲ್ಫ್ ಅಸೋಸಿಯೇಶನ್‌ನಲ್ಲಿ (ಎಲ್‌ಪಿಜಿಎ)ಯಲ್ಲಿ ಇದು ಅದಿತಿ ಅಶೋಕ್ ಅವರಿಗೆ  ವೃತ್ತಿ ಶ್ರೇಷ್ಠ ಪ್ರದರ್ಶನವಾಗಿದೆ.

ಉತ್ತಮ ಸಾಮರ್ಥ್ಯ ತೋರಿದ ಭಾರತದ ಅದಿತಿ ಅಶೋಕ್‌ ಹಾಗೂ ಥಾಯ್ಲೆಂಡ್‌ನ ಪಜರಿ ಅನಣ್ಣರುಕರ್ಣ್‌ ಅವರು ಇಲ್ಲಿ ನಡೆದ ಡೊವ್‌ ಗ್ರೇ ಟ್ ಲೇಕ್ಸ್‌ ಬೇ ಆಹ್ವಾನಿತ ಗಾಲ್ಫ್‌ ಟೂರ್ನಿಯಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ. ಥಾಯ್ಲೆಂಡ್‌ನ ಸಹೋದರಿಯರಾದ ಅರಿಯಾ ಮತ್ತು ಮೊರಿಯಾ ಜುಟಾನುಗರ್ನ್ ಪ್ರಶಸ್ತಿ  ಗೆದ್ದುಕೊಂಡರು. ಟೂರ್ನಿಯಲ್ಲಿ ಈ ಹಿಂದೆ ಚಾಂಪಿಯನ್ ಆಗಿದ್ದ ಅಮೆರಿಕದ ಸಿಡ್ನಿ ಕ್ಲ್ಯಾಂಟನ್ ಮತ್ತು ಥಾಯ್ಲೆಂಡ್‌ನ ಜಾಸ್ಮಿನ್ ಸುವಣ್ಣಪುರ ಜೋಡಿಯು ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.

ಸೈಡ್ನಿ ಕ್ಲಾಂಟನ್ ಮತ್ತು ಜಾಸ್ಮಿನ್ ಸುವಣ್ಣಪುರ ಜೊತೆಯಲ್ಲಿ ಜಂಟಿಯಾಗಿ ಅಂತಿಮ ಸುತ್ತನ್ನು ಪ್ರಾರಂಭಿಸಿದಾಗ ದೊಡ್ಡ ಭರವಸೆಗಳಿದ್ದವು. ಎಲ್ಪಿಜಿಎ ಟೂರ್ನಿಯಲ್ಲಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಅಂತಿಮ ಸುತ್ತಿನಲ್ಲಿ ಅವರ ಯೋಜನೆಗಳು  ಫಲನೀಡಲಿಲ್ಲ. ಆದರೆ ಅಂತಿಮವಾಗಿ ಅದ್ಭುತ ಪ್ರದರ್ಶನ ನೀಡಿದ ಆರಿಯಾ ಮತ್ತು ಮೊರಿಯಾ ಜುಟಾನುಗಾರ್ನ್ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು. ಇವರಿಗೆ ತೀವ್ರ ಪೈಪೋಟಿ ನೀಡಿದ ಅದಿತಿ ಅಶೋಕ್ ಮತ್ತು ಪಜಾರಿ ಅನನ್ನರುಕರ್ನ್  ಜಂಟಿ ಮೂರನೇ ಸ್ಥಾನ ಪಡೆದರು. 

ಈಗಾಗಲೇ ಅದಿತಿ ಅವರು ಲೇಡೀಸ್ ಯುರೋಪಿಯನ್ ಪ್ರವಾಸದಲ್ಲಿ ಮೂರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
 

SCROLL FOR NEXT