ಕ್ರೀಡೆ

ಬೆಳ್ಳಿ ಗೆದ್ದ ಚಾನುಗೆ ಮಹಿಳಾ ನಕ್ಸಲ್ ವಿರೋಧಿ ಕಮಾಂಡೋ ಪಡೆ 'ದಂತೇಶ್ವರಿ ಫೈಟರ್ಸ್' ಶ್ಲಾಘನೆ

Vishwanath S

ರಾಯಪುರ: ಟೋಕಿಯೊ ಒಲಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನುರನ್ನು ಛತ್ತೀಸ್‌ಗಢದ ದಂತೇವಾಡಾದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಘಟಕ ದಂತೇಶ್ವರಿ ಫೈಟರ್ಸ್ ಶ್ಲಾಘಿಸಿದ್ದಾರೆ.

ಭಾರತಕ್ಕೆ ಎಂತಹ ಅದ್ಭುತ ಆರಂಭ. ಅವರ ಸಾಧನೆ ನಮಗೂ ಸ್ಫೂರ್ತಿ ನೀಡುತ್ತದೆ. ಇದು ಭಾರತೀಯರಿಗೆ ಮಹಿಳಾ ಸಬಲೀಕರಣದ ಸಂಕೇತವಾಗಿದೆ ಎಂದು ಸಮವಸ್ತ್ರದಲ್ಲಿರುವ ಮಹಿಳಾ ಫೈಟರ್ಸ್ ಶ್ಲಾಘಿಸಿದರು.

ಟೋಕಿಯೊದಲ್ಲಿ ಪದಕ ಗೆಲ್ಲುವ ಮೂಲಕ ಭಾರತದ ಪರ ಖಾತೆ ತೆರೆದಿರುವುದಕ್ಕೆ ದಂತೇಶ್ವರಿ ಫೈಟರ್ಸ್ ಹೆಚ್ಚು ಖುಷಿಪಟ್ಟರು ಎಂದು ದಂತೇವಾಡ ಎಸ್‌ಪಿ ಅಭಿಷೇಕ್ ಪಲ್ಲವ ಹೇಳಿದರು.

2000ನೇ ಇಸವಿಯಲ್ಲಿ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕವನ್ನು ದೇಶಕ್ಕೆ ಗೆದ್ದು ತಂದಿದ್ದರು. ಆ ಬಳಿಕ ಒಲಿಂಪಿಕ್ಸ್ ನಲ್ಲಿ ಪದಕ ತಂದ ಎರಡನೇ ಮಹಿಳಾ ಸ್ಪರ್ಧಿ ಈ ಮೀರಾಬಾಯಿ ಚಾನು.

SCROLL FOR NEXT