ಕ್ರೀಡೆ

'ಮನೆ ಊಟ ಸವಿಯುವ ಖುಷಿಯೇ ಬೇರೆ': 2 ವರ್ಷ ಬಳಿಕ ಮನೆಯ ಊಟ ಉಂಡ ಖುಷಿ ಹಂಚಿಕೊಂಡ ಮೀರಾಬಾಯಿ ಚಾನು!

Sumana Upadhyaya

ಮಣಿಪುರ: ತಿಂಗಳುಗಟ್ಟಲೆ ಹೊರಗೆ ಹೊಟೇಲ್, ಮೆಸ್, ಹಾಸ್ಟೆಲ್ ಊಟ ತಿಂದವರಿಗೆ ಮನೆಯಲ್ಲಿ ಅಮ್ಮ ಅಥವಾ ಕುಟುಂಬ ಸದಸ್ಯರು ಮಾಡಿದ ಅಡುಗೆಯ ರುಚಿ ಗೊತ್ತಾಗುತ್ತದೆ. ಮನೆ ಊಟ ಎಷ್ಟೆಂದರೂ ಮನೆ ಊಟವೇ, ಯಾವ ಸ್ಟಾರ್ ಹೊಟೇಲ್ ನ ಊಟವೂ ಅದರ ಹತ್ತಿರಕ್ಕೆ ಸುಳಿಯಲು ಸಾಧ್ಯವಿಲ್ಲ ಎಂಬ ಅನುಭವದ ಮಾತುಗಳನ್ನು ಅನೇಕರು ಹೇಳುವುದನ್ನು ಕೇಳುತ್ತೇವೆ.

ಕಳೆದ ವಾರವಷ್ಟೇ ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಮಹಿಳೆಯರ ವೇಟ್ ಲಿಫ್ಟಿಂಗ್ ನಲ್ಲಿ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದುಕೊಂಡು ಬಂದಿರುವ ಭಾರತದ ಸೈಕೋಮ್ ಮೀರಾಬಾಯಿ ಚಾನು ಈಗ ತಮ್ಮ ಮನೆ ಮಣಿಪುರದಲ್ಲಿ ತಂದೆ-ತಾಯಿ ಕುಟುಂಬಸ್ಥರ ಜೊತೆ ಸಂತೋಷದ ದಿನಗಳನ್ನು ಕಳೆಯುತ್ತಿದ್ದಾರೆ.

ಈ ಬೆಳ್ಳಿಪದಕ ಗೆಲ್ಲುವ ಹಿಂದೆ ಸಾಕಷ್ಟು ವರ್ಷಗಳ ನಿರಂತರ ಪರಿಶ್ರಮ, ಮನೆಯಿಂದ ತಿಂಗಳುಗಟ್ಟಲೆ, ವರ್ಷಗಟ್ಟಲೆ ಹೊರಗಿದ್ದು ಹಸಿವಾದಾಗ ಸಿಕ್ಕಿದ ಆಹಾರ ತಿನ್ನಬೇಕಾದ ಪರಿಸ್ಥಿತಿ ಎದುರಾಗಿತ್ತು ಚಾನುಗೆ. ಅಭ್ಯಾಸ, ತರಬೇತಿ, ಪಂದ್ಯ ಎಂದು ಕಳೆದ ಎರಡು ವರ್ಷಗಳಿಂದ ಮನೆಯಿಂದ ದೂರವಿದ್ದು ಚಾನು ಈಗ ಮನೆಗೆ ಮರಳಿ ತಮ್ಮಿಷ್ಟದ ಊಟ ತಿಂಡಿ ಸೇವಿಸುತ್ತಿದ್ದಾರೆ. ನೆಲದ ಮೇಲೆ ಕುಳಿತು ಮುಂದೆ ತಟ್ಟೆ ಇಟ್ಟು ಸವಿದ ಊಟವನ್ನು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಎರಡು ವರ್ಷ ಬಳಿಕ ಮನೆಯಲ್ಲಿ ತಿನ್ನುವ ಊಟದ ಸವಿಯೇ ಬೇರೆ ಎಂದು ಬರೆದುಕೊಂಡಿದ್ದಾರೆ. ಮೀರಾ ಚಾನು ಇತ್ತೀಚೆಗೆ ತಮ್ಮಿಷ್ಟದ ಪಿಜ್ಜಾವನ್ನು ಸವಿದಿದ್ದರು.

SCROLL FOR NEXT