ಕ್ರೀಡೆ

ಟೋಕಿಯೊ ಒಲಿಂಪಿಕ್ಸ್: ಮಹಿಳೆಯರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಅಂತಿಮ ಸುತ್ತು ಪ್ರವೇಶಿಸಿದ ಭಾರತದ ಕಮಲ್ ಪ್ರೀತ್ ಕೌರ್ 

Sumana Upadhyaya

ಟೋಕಿಯೊ: ಮಹಿಳೆಯರ ಚಕ್ರ ಎಸೆತ(ಡಿಸ್ಕಸ್ ಥ್ರೋ) ಪಂದ್ಯದಲ್ಲಿ ಶನಿವಾರ ಭಾರತದ ಕಮಲ್ ಪ್ರೀತ್ ಕೌರ್ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಒಂದು ಪದಕವನ್ನು ಖಚಿತಪಡಿಸಿದ್ದಾರೆ. 

64.00 ಮೀಟರ್  ದೂರದವರೆಗೆ ಡಿಸ್ಕಸ್ ಥ್ರೋ ಹಾರಿಸುವ ಮೂಲಕ ಅಂತಿಮ ಸುತ್ತು ಪ್ರವೇಶಿಸುವ ಮೂಲಕ ಭಾರತದ ಕಮಲ್ ಪ್ರೀತ್ ಕೌರ್ ಈ ಬಾರಿಯ ಒಲಿಂಪಿಕ್ ನಲ್ಲಿ ಅಂತಿಮ ಸುತ್ತು ಪ್ರವೇಶಿಸಿದ ಎರಡನೇ ಆಟಗಾರ್ತಿಯಾಗಿದ್ದಾರೆ. ಅಮೆರಿಕಾದ ವಲರೈ ಅಲ್ಲಮ್ ಕೂಡ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.

ಮಹಿಳಾ ಚಕ್ರ ಎಸೆತದಲ್ಲಿ ಭಾರತದ ಕಮಲ್‌ಪ್ರೀತ್ ಕೌರ್ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದು ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತದ ಸ್ಪರ್ಧಿಯಿಂದ ದಾಖಲಾದ ಶ್ರೇಷ್ಠ ಸಾಧನೆಯಾಗಿದೆ.

SCROLL FOR NEXT