ವಂದನಾ ಕಟಾರಿಯಾ 
ಕ್ರೀಡೆ

ಟೋಕಿಯೊ ಒಲಂಪಿಕ್ಸ್: ಹ್ಯಾಟ್ರಿಕ್ ಬಾರಿಸಿದ ಮೊದಲ ಭಾರತದ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾದ ವಂದನಾ ಕಟಾರಿಯಾ!

ಅಂತಿಮ ಹಂತದ ಎ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ನಾಲ್ಕು ಗೋಲುಗಳಿಂದ ಗೆಲುವು ಸಾಧಿಸಿದೆ. ಇನ್ನು ಈ ನಾಲ್ಕು ಗೋಲುಗಳಲ್ಲಿ ಮೂರನ್ನು ವಂದನಾ ಕಟಾರಿಯಾ ಬಾರಿಸುವ ಮೂಲಕ ಕ್ರೀಡಾಕೂಟದಲ್ಲಿ ಮೊದಲ ಹ್ಯಾಟ್ರಿಕ್ ಗೋಲು ಬಾರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಟೋಕಿಯೊ: ಅಂತಿಮ ಹಂತದ ಎ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ನಾಲ್ಕು ಗೋಲುಗಳಿಂದ ಗೆಲುವು ಸಾಧಿಸಿದೆ. ಇನ್ನು ಈ ನಾಲ್ಕು ಗೋಲುಗಳಲ್ಲಿ ಮೂರನ್ನು ವಂದನಾ ಕಟಾರಿಯಾ ಬಾರಿಸುವ ಮೂಲಕ ಕ್ರೀಡಾಕೂಟದಲ್ಲಿ ಮೊದಲ ಹ್ಯಾಟ್ರಿಕ್ ಗೋಲು ಬಾರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಒಯಿ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 29 ವರ್ಷದ ವಂದನಾ ಸಿಡಿಸಿದ ಮೂರು ಗೋಲು ಟೋಕಿಯೊ ಒಲಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯುವ ಮಹಿಳಾ ಹಾಕಿ ತಂಡದ ಆಸೆಯನ್ನು ಜೀವಂತಗೊಳಿಸಿದೆ. ಇನ್ನು ಐರ್ಲೆಂಡ್ ಮತ್ತು ಗ್ರೇಟ್ ಬ್ರಿಟನ್ ಆಟದ ಫಲಿತಾಂಶ ಮೇಲೆ ಭಾರತ ಮಹಿಳಾ ತಂಡದ ಅಳಿವು, ಉಳಿವು ನಿಂತಿದೆ. 

ವಂದನಾ ಕಟಾರಿಯಾ ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು ಎಂದು ಟೋಕಿಯೊ 2020 ಭಾರತ ಟ್ವೀಟ್ ಮಾಡಿದೆ.

ಐದು ಗುಂಪು ಹಂತದ ಪಂದ್ಯಗಳಲ್ಲಿ ಭಾರತ ಎರಡರಲ್ಲಿ ಗೆದ್ದಿದ್ದು ಮೂರರಲ್ಲಿ ಪರಾಭವಗೊಂಡಿದೆ. ಕಟಾರಿಯಾ ಪಂದ್ಯದ ಆರಂಭದಲ್ಲಿ ಎರಡು ಗೋಲು ಬಾರಿಸಿದ್ದು ನಂತರ ಕೊನೆಯಲ್ಲಿ ತಂಡಕ್ಕಾಗಿ ನಾಲ್ಕನೇ ಗೋಲು ಬಾರಿಸಿ ಗೆಲುವು ತಂದುಕೊಟ್ಟರು. 

ಇನ್ನು ನೇಹಾ ಗೋಯಲ್ ಭಾರತದ ಪರ 1 ಗೋಲು ಬಾರಿಸಿದ್ದು ತಂಡ ದಕ್ಷಿಣ ಆಫ್ರಿಕಾವನ್ನು 4-3ರಿಂದ ಸೋಲಿಸಲು ಸಹಾಯಕವಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

ಇರಾನ್-ಅಮೆರಿಕ ಯುದ್ಧ ಮುಂದುವರೆದರೆ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇ ಕುತ್ತು!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

SCROLL FOR NEXT