ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಚೆಸ್ ವಿಶ್ವಕಪ್ ಗೆ ಅರ್ಹತೆ ಪಡೆದ ವಿದಿತ್ ಗುಜರಾತಿ

ಭಾರತದ ಚೆಸ್ ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ ರೇಟಿಂಗ್ ಆಧಾರದ ಮೇಲೆ ಜುಲೈ 10ರಿಂದ ರಷ್ಯಾದ ಸೋಚಿಯಲ್ಲಿ ನಡೆಯಲಿರುವ ಫಿಡ್ ಚೆಸ್ ವಿಶ್ವಕಪ್ 2021ಗೆ ಅರ್ಹತೆ ಪಡೆದಿದ್ದಾರೆ.

ವಿದಿತ್ ಗುಜರಾತಿ
Vishwanath S
Updated On : 4 Jun 2021, 1:34 am

ಚೆನ್ನೈ: ಭಾರತದ ಚೆಸ್ ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ ರೇಟಿಂಗ್ ಆಧಾರದ ಮೇಲೆ ಜುಲೈ 10ರಿಂದ ರಷ್ಯಾದ ಸೋಚಿಯಲ್ಲಿ ನಡೆಯಲಿರುವ ಫಿಡ್ ಚೆಸ್ ವಿಶ್ವಕಪ್ 2021ಗೆ ಅರ್ಹತೆ ಪಡೆದಿದ್ದಾರೆ.

ಇದರೊಂದಿಗೆ ಮುಂಬರುವ ವಿಶ್ವಕಪ್‌ಗೆ ಅರ್ಹತೆ ಪಡೆದ ನಾಲ್ಕನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಗ್ರ್ಯಾಂಡ್‌ಮಾಸ್ಟರ್ ಗುಜರಾತಿ ಪಾತ್ರರಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಪ್ರಸ್ತುತ ವಿಶ್ವದ 23ನೇ ಸ್ಥಾನದಲ್ಲಿರುವ ವಿದಿತ್ ಗುಜರಾತಿ, ಗ್ರ್ಯಾಂಡ್‌ಮಾಸ್ಟರ್ಸ್ ಪಿ ಹರಿರಿಕೃಷ್ಣ, ಅರವಿಂದ ಚಿದಂಬರಂ ಮತ್ತು ಪಿ ಇನಿಯಾನ್ ಸೇರಿದ್ದಾರೆ.

Advertisement

Advertisement

ಏತನ್ಮಧ್ಯೆ, ಮಹಿಳೆಯರ ವಿಭಾಗದಲ್ಲಿ ಕೊನೆರು ಹಂಪಿ, ಡಿ ಹರಿಕಾ, ಭಕ್ತಿ ಕುಲಕರ್ಣಿ, ಆರ್ ವೈಶಾಲಿ ಮತ್ತು ಪದ್ಮಿನಿ ರೂಟ್ ವಿಶ್ವಕಪ್‌ನಲ್ಲಿ ಅರ್ಹತೆ ಪಡೆದಿದ್ದಾರೆ.

2017 ಮತ್ತು 2019ರ ನಂತರ ವಿದಿತ್ ಗೆ ಇದು ಮೂರನೇ ವಿಶ್ವಕಪ್ ಪ್ರದರ್ಶನವಾಗಿದೆ. ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ವಿಶ್ವಾಸವಿದೆ ಎಂದು ವಿದಿತ್ ಹೇಳಿದರು.

ಡಬ್ಲ್ಯೂಸಿ ತಂಡದ ಭಾಗವಾಗಲು ನಿಜವಾಗಿಯೂ ಸಂತೋಷವಾಗಿದೆ. ಭಾರತಕ್ಕಾಗಿ ಆಡುವುದು ಯಾವಾಗಲೂ ಹೆಮ್ಮೆಯ ಕ್ಷಣವಾಗಿದೆ. ವಿಶೇಷವಾಗಿ ವಿಶ್ವಕಪ್ ನಂತಹ ಕ್ರೀಡೆಗಳಲ್ಲಿ ಭಾಗಿಯಾಗುವುದು ಅತ್ಯಂತ ಪ್ರತಿಷ್ಠಿತ ಸಂಗತಿಯಾಗಿದೆ ಎಂದು ಗುಜರಾತಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments