ಕ್ರೀಡೆ

'ನಾವು ಕ್ರೀಡಾ ವಿಭಾಗವನ್ನು ನಿರ್ಲಕ್ಷಿಸಲಾಗದು': ಆಥ್ಲೀಟ್ ಗಳಿಗೆ ಲಸಿಕೆ ನೀಡುವಂತೆ ಕೇರಳ ಸಿಎಂಗೆ ಪಿಟಿ ಉಷಾ ಮನವಿ

Nagaraja AB

ನವದೆಹಲಿ:  ಒಲಿಂಪಿಕ್ ಅರ್ಹತೆಗಾಗಿ ಇದೇ ತಿಂಗಳ 25 ರಿಂದ 29 ರವರೆಗೆ ನಡೆಯಲಿರುವ ರಾಷ್ಟ್ರೀಯ, ಅಂತರ್ ರಾಜ್ಯ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳುವ ರಾಜ್ಯದ ಆಥ್ಲೀಟ್ ಗಳಿಗೆ ಲಸಿಕೆ ನೀಡಿಕೆಗೆ ವ್ಯವಸ್ಥೆ ಮಾಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಬಳಿ ಓಟದ ರಾಣಿ ಪಿ.ಟಿ.ಉಷಾ ಮನವಿ ಮಾಡಿದ್ದಾರೆ.

ಲಸಿಕೆ ಪ್ರಕ್ರಿಯೆಯಲ್ಲಿ ಕ್ರೀಡಾಪಟುಗಳನ್ನು ನಿರ್ಲಕ್ಷಿಸಬಾರದು ಎಂದು 1986 ರ ಆವೃತ್ತಿಯಲ್ಲಿ ನಾಲ್ಕು ಬಂಗಾರ ಸೇರಿದಂತೆ ಏಷ್ಯಾನ್ ಗೇಮ್ಸ್ ನಲ್ಲಿ 11 ಪದಕಗಳನ್ನು ಜಯಿಸಿರುವ 56 ವರ್ಷದ ಪಿ.ಟಿ.ಉಷಾ ಹೇಳಿದ್ದಾರೆ.

ಮುಂಬರುವ ರಾಷ್ಟ್ರೀಯ, ಇನ್ನಿತರ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲಿರುವ ಕ್ರೀಡಾಪಟುಗಳು, ಅವರ ತರಬೇತುದಾರರು, ಕ್ರೀಡಾ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿಗೆ ಲಸಿಕೆ ಹಾಕುವಂತೆ ಕೇರಳ ಮುಖ್ಯಮಂತ್ರಿ ಬಳಿ ವಿನಮ್ರತೆಯಿಂದ ಮನವಿ ಮಾಡುವುದಾಗಿ ಅವರು ಟ್ವಿಟ್ ಮಾಡಿದ್ದಾರೆ. ಕ್ರೀಡಾ ಕ್ಷೇತ್ರವನ್ನು ನಾವು ನಿರ್ಲಕ್ಷಿಸಲಾಗದು ಎಂದಿದ್ದಾರೆ.

ಪಾಟಿಯಾಲದಲ್ಲಿ ರಾಷ್ಟ್ರೀಯ, ಅಂತರ್ ರಾಜ್ಯ ಚಾಂಪಿಯನ್ ಶಿಪ್ ನಡೆಯಲಿದ್ದು, ಇದು ಟೊಕಿಯೊ ಒಲಿಂಪಿಕ್ಸ್ ಅರ್ಹತೆಗಾಗಿ ಭಾರತೀಯ ಆಥ್ಲೀಟ್ ಗಳಿಗೆ ಕೊನೆಯ ಅವಕಾಶವಾಗಿದೆ. ಆಥ್ಲೀಟ್ ಗಳಿಗೆ  ಒಲಿಂಪಿಕ್ ಗೆ ಅರ್ಹತೆ ಪಡೆಯಲು ಜೂನ್ 29 ಕೊನೆಯ ದಿನವಾಗಿದೆ. 

SCROLL FOR NEXT