ಕ್ರೀಡೆ

ಫ್ರೆಂಚ್ ಓಪನ್ ಫೈನಲ್‌: 19 ನೇ ಗ್ರ್ಯಾನ್ ಸ್ಲಾಮ್ ಗೆದ್ದ ನೋವಾಕ್ ಜೊಕೋವಿಚ್

Srinivas Rao BV

ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಫೈನಲ್ಸ್ ನಲ್ಲಿ  ಅಗ್ರ ಶ್ರೇಯಾಂಕ ಆಟಗಾರ ನೋವಾಕ್ ಜೊಕೋವಿಚ್ ತಮ್ಮ ಎದುರಾಳಿ ಸ್ಟೆಫಾನೋಸ್ ಸಿಸಿಪಾಸ್  ಅವರನ್ನು ಮಣಿಸಿದ್ದಾರೆ. 

ಭಾನುವಾರ (ಜೂ.13) ರಂದು ನಡೆದ ಪಂದ್ಯದಲ್ಲಿ 6-7 (6), 2-6, 6-3, 6-2, 6-4 ಸೆಟ್ ಗಳಿಂದ ಸಿಸಿಪಾಸ್ ಅವರ ವಿರುದ್ಧ ಗೆದ್ದಿರುವ ನೋವಾಕ್ ಜೊಕೋವಿಚ್ 19 ನೇ ಗ್ರ್ಯಾನ್ ಸ್ಲಾಮ್ ಗೆದ್ದಿದ್ದಾರೆ. 

ಈ ಗೆಲುವಿನ ಮೂಲಕ ನೋವಾಕ್ ಜೊಕೋವಿಚ್ ದಾಖಲೆ ನಿರ್ಮಿಸಿದ್ದು, ರಫೆಲ್ ನಾಡಲ್ ಹಾಗೂ ರೋಜರ್ ಫೆಡರರ್ ಅವರು ಹಂಚಿಕೊಂಡಿರುವ 20 ನೇ ಗ್ರ್ಯಾನ್ ಸ್ಲಾಮ್ ಗೆದ್ದಿರುವ ಪುರುಷರ ವಿಭಾಗದ ದಾಖಲೆಯನ್ನು ಮುರಿಯುವುದಕ್ಕೆ ನೋವಾಕ್ ಜೊಕೋವಿಚ್ ಗೆ ಇನ್ನೊಂದೇ ಹಂತ ಬಾಕಿ ಇದೆ. 
 
ಇದಷ್ಟೇ ಅಲ್ಲದೇ ನೋವಾಕ್ ಜೊಕೋವಿಚ್ ಅವರ ಕ್ಯಾಲೆಂಡರ್ ವರ್ಷದ ಗ್ರ್ಯಾನ್ ಸ್ಲಾಮ್ ಕನಸಿನ ಅರ್ಧ ದಾರಿಯನ್ನು ಈ ಗೆಲುವು ಸುಗಮವಾಗಿಸಿದೆ. 1969 ರಲ್ಲಿ  ರಾಡ್ ಲಾವರ್ ನಲ್ಲಿ ಹೊರತುಪಡಿಸಿದರೆ ಇಂತಹ ದಾಖಲೆಯನ್ನು ಈವರೆಗೂ ಯಾರೂ ನಿರ್ಮಿಸಿಲ್ಲ. 

ಶುಕ್ರವಾರ ತಡ ರಾತ್ರಿ ನಡೆದ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕ ಆಟಗಾರ ನೋವಾಕ್ ಜೊಕೋವಿಚ್, ರಫೆಲ್ ನಡಾಲ್ ಅವರನ್ನು ನಾಲ್ಕು ಸೆಟ್‌ಗಳ ಸೆಣಸಾಟದಲ್ಲಿ ಸೋಲಿಸಿ ಅಂತಿಮ ಹಂತ ತಲುಪಿದ್ದರು. 

SCROLL FOR NEXT