ಕ್ರೀಡೆ

ಎಫ್‌ಐಹೆಚ್ ಹಾಕಿ ಪ್ರೊ ಲೀಗ್: ನ್ಯೂಜಿಲೆಂಡ್ ವಿರುದ್ಧ ಕಾದಾಡಲಿರುವ ಭಾರತ

Raghavendra Adiga

ನವದೆಹಲಿ: ಎಫ್‌ಐಹೆಚ್ ಹಾಕಿ ಪ್ರೊ ಲೀಗ್ 2021-22ರಲ್ಲಿ ಭಾರತವು, ನ್ಯೂಜಿಲೆಂಡ್ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಲಿದೆ.

ಡಬಲ್ ಹೆಡರ್ ಪಂದ್ಯಗಳಿಗಾಗಿ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಮಾಡಲಿದೆ. ನಂತರ ಭಾರತ ಆಸ್ಟ್ರೇಲಿಯಾ ಜೊತೆ ಪಂದ್ಯ ಆಡಲಿದೆ.

ಭಾರತ ಕಳೆದ ತಿಂಗಳು ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಆಡಿತ್ತು. ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ ​​(ಎಫ್‌ಐಹೆಚ್) 2021-22ರ ಋತುವಿನ ಪ್ರೊ ಹಾಕಿ ಲೀಗ್‌ನ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಈ ವರ್ಷ, ಲೀಗ್ ಅಕ್ಟೋಬರ್ 6 ರಂದು ಪ್ರಾರಂಭವಾಗಲಿದೆ.

“ಎಫ್‌ಐಹೆಚ್ 2021-22ರ ಋತುವಿನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಿಂದ ನಮ್ಮ ಸಿದ್ಧತೆಗಳಿಗೆ ಅವಕಾಶ ಲಭಿಸುತ್ತಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡುವುದರ ಮೇಲೆ ನಮ್ಮ ಗಮನವಿದೆ. ವರ್ಷದ ದ್ವಿತೀಯಾರ್ಧದಲ್ಲಿ ನಾವು ಏನು ಮಾಡಬೇಕೆಂದು ಈಗ ನಮಗೆ ತಿಳಿದಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಅವರ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲು ನಾವು ತಯಾರಿ ನಡೆಸಬೇಕು" ಎಂದು ಭಾರತದ ನಾಯಕ ಮನ್‌ಪ್ರೀತ್ ಸಿಂಗ್ ತಿಳಿಸಿದ್ದಾರೆ.

"ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ತವರಲ್ಲಿ ಬಹಳ ಬಲಿಷ್ಠ ತಂಡಗಳಾಗಿವೆ ಮತ್ತು ಅಂತಹ ತಂಡಗಳ ವಿರುದ್ಧ ನಮ್ಮ ಅಭಿಯಾನವನ್ನು ಪ್ರಾರಂಭಿಸುವುದು ರೋಚಕ ಹುಟ್ಟಿಸಿದೆ " ಎಂದು ಮನ್‌ಪ್ರೀತ್ ಹೇಳಿದರು.

ಭಾರತವು 5 ಫೆಬ್ರವರಿ 2022 ರಂದು ನ್ಯೂಜಿಲೆಂಡ್‌ನೊಂದಿಗೆ ಸ್ಪರ್ಧಿಸಲಿದೆ. ಭಾರತ, ಆಸ್ಟ್ರೇಲಿಯಾವನ್ನು 12 ಮತ್ತು 13 ಫೆಬ್ರವರಿ 2022 ರಂದು ಎದುರಿಸಲಿದೆ. ಸ್ಪೇನ್ (26 ಮತ್ತು 27 ಫೆಬ್ರವರಿ), ಜರ್ಮನಿ (ಮಾರ್ಚ್ 12 ಮತ್ತು 13) ಮತ್ತು ಅರ್ಜೆಂಟೀನಾ (19 ಮತ್ತು 20 ಮಾರ್ಚ್) ವಿರುದ್ಧ ಭಾರತ ಸೆಣಸಲಿದೆ. 

SCROLL FOR NEXT