ಟೋಕಿಯೊ ಗವರ್ನರ್ ಗೆ ಸಲ್ಲಿಸಲಾಗಿರುವ ಅರ್ಜಿ 
ಕ್ರೀಡೆ

2020 ಒಲಿಂಪಿಕ್ಸ್ ರದ್ದತಿಗಾಗಿ ಟೋಕಿಯೊ ಗವರ್ನರ್ ಗೆ ಅರ್ಜಿ!

ಟೋಕಿಯೊ ಒಲಿಂಪಿಕ್ಸ್ 2020 ರದ್ದತಿಗೆ ಸಂಬಂಧಿಸಿದಂತೆ ಮೂರು ಲಕ್ಷ 51 ಸಾವಿರ ಜನರ ಸಹಿಯುಳ್ಳ ಆನ್ ಲೈನ್ ಅರ್ಜಿಯನ್ನು  ಟೋಕಿಯೊ ಗವರ್ನರ್ ಯೂರಿಕೊ ಕೊಯಿಕೆ ಅವರಿಗೆ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿಗಳ ಮುಖ್ಯಸ್ಥರಿಗೂ  ಕಳುಹಿಸಲಾಗಿದೆ.

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ 2020 ರದ್ದತಿಗೆ ಸಂಬಂಧಿಸಿದಂತೆ ಮೂರು ಲಕ್ಷ 51 ಸಾವಿರ ಜನರ ಸಹಿಯುಳ್ಳ ಆನ್ ಲೈನ್ ಅರ್ಜಿಯನ್ನು  ಟೋಕಿಯೊ ಗವರ್ನರ್ ಯೂರಿಕೊ ಕೊಯಿಕೆ ಅವರಿಗೆ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿಗಳ ಮುಖ್ಯಸ್ಥರಿಗೂ  ಕಳುಹಿಸಲಾಗಿದೆ.

ಟೋಕಿಯೊ ಒಲಿಂಪಿಕ್ ಕ್ರೀಡಾಕೂಟವನ್ನು ರದ್ದುಗೊಳಿಸಬೇಕೆಂಬ ಜನರು ಕೊರೋನಾ ಸಾಂಕ್ರಾಮಿಕ ಯುಗದಲ್ಲಿ ಕ್ರೀಡಾ ಕೂಟವನ್ನು ಆಯೋಜಿಸುವ ಬದಲು ಜೀವ ಉಳಿಸಲು ಆದ್ಯತೆ ನೀಡುವಂತೆ ಒಲಿಂಪಿಕ್ ಸಮಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ರಾಜ್ಯಪಾಲ ಯೂರಿಕೊ ಕೊಯಿಕೆ ಅವರು ಒಲಿಂಪಿಕ್ ಕ್ರೀಡಾಕೂಟದ ವಿರುದ್ಧ ನಡೆಯುತ್ತಿರುವ ಅಭಿಯಾನದ ಬಗ್ಗೆ, ಅವರು ಸುರಕ್ಷಿತ ಒಲಿಂಪಿಕ್ಸ್ ಆಯೋಜನೆಯತ್ತ ಕೆಲಸ ಮಾಡುವುದಾಗಿ ಹೇಳಿದರು.

ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದರೂ, ಕ್ರೀಡಾಕೂಟಕ್ಕೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಬೆಂಬಲಕ್ಕಾಗಿ ಸಂಘಟಕರು ಕಾಯುತ್ತಿದ್ದಾರೆ ಎಂದು ಜಪಾನ್ ನ ಆರ್ಥಿಕ ಸಚಿವ ಯಸುತೋಶಿ ನಿಶಿಮುರಾ ಹೇಳಿದ್ದಾರೆ.ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚುತ್ತದೆ ಎಂದು ಅನೇಕ ಜನರು  ಚಿಂತಿತರಾಗಿದ್ದಾರೆಂದು ನನಗೆ ತಿಳಿದಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿರ್ಧಾರವನ್ನು ಆಧರಿಸಿ ಟೋಕಿಯೊ ಒಲಿಂಪಿಕ್ಸ್ 2020  ಆಯೋಜಿಸಲು ಸಂಘಟಕರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. 

ಶುಕ್ರವಾರ ಹೊಕ್ಕೈಡೋ ಪ್ರಾಂತ್ಯ ಸೇರಿದಂತೆ ಮೂರು  ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ಮೇ 31 ರವರೆಗೆ ವಿಸ್ತರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT