ಮೊನಾಲಿ ಗೊರ್ಹೆ 
ಕ್ರೀಡೆ

ತಂದೆ ಕೊರೋನಾಗೆ ಬಲಿಯಾದ ಕೆಲ ಗಂಟೆಗಳಲ್ಲೇ ಪುತ್ರಿ, ಶೂಟಿಂಗ್ ಕೋಚ್ ಮೊನಾಲಿ ಗೊರ್ಹೆ ಬ್ಲಾಕ್ ಫಂಗಸ್ ನಿಂದ ಸಾವು

ಭಾರತದ ಶೂಟಿಂಗ್ ಕೋಚ್ ಮತ್ತು ತಾಂತ್ರಿಕ ಅಧಿಕಾರಿ ಮೊನಾಲಿ ಗೊರ್ಹೆ(44) ಗುರುವಾರ ಬ್ಲಾಕ್ ಫಂಗಸ್ (ಮ್ಯೂಕೋರ್ಮೈಕೋಸಿಸ್) ನಿಂದ ನಿಧನರಾದರು. ಮೃತರು ಅವರ ತಾಯಿ ಮತ್ತು ಸಹೋದರಿಯರನ್ನು ಅಗಲಿದ್ದಾರೆ.

ನವದೆಹಲಿ: ಭಾರತದ ಶೂಟಿಂಗ್ ಕೋಚ್ ಮತ್ತು ತಾಂತ್ರಿಕ ಅಧಿಕಾರಿ ಮೊನಾಲಿ ಗೊರ್ಹೆ (44) ಗುರುವಾರ ಬ್ಲಾಕ್ ಫಂಗಸ್ (ಮ್ಯೂಕೋರ್ಮೈಕೋಸಿಸ್) ನಿಂದ ನಿಧನರಾದರು. ಮೃತರು  ಅವರ ತಾಯಿ ಮತ್ತು ಸಹೋದರಿಯರನ್ನು ಅಗಲಿದ್ದಾರೆ.

ಕೋವಿಡ್-19 ಕಾಣಿಸಿಕೊಂಡ ನಂತರ ಮೊನಾಲಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದರು. ಆದರೆ ಬ್ಲಾಕ್ ಫಂಗಸ್ ಕಾಣಿಸಿಕೊಂಡು  ಆಕೆ ಮತ್ತೆ ಆಸ್ಪತ್ರೆ ಸೇರಿದ್ದರು.

ಇನ್ನು ಮೊನಾಲಿ ಸಾವನ್ನಪ್ಪುವ ಕೆಲ ಗಂಟೆಗಳ ಹಿಂದೆ ಅವರ ತಂದೆ ಮನೋಹರ್ ಗೊರ್ಹೆ ಕೊರೋನಾದಿಂದ ಸಾವನ್ನಪ್ಪಿದ್ದರು.

ಮೊನಾಲಿ ಪಿಸ್ತೂಲ್ ಕೋರ್ ಗುಂಪಿನ ತರಬೇತುದಾರರಾಗಿದ್ದರು. ಅವರು ಶ್ರೀಲಂಕಾದ ಶೂಟಿಂಗ್ ತಂಡದ ರಾಷ್ಟ್ರೀಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಮಹಾರಾಷ್ಟ್ರದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು ನಾಸಿಕ್‌ನಲ್ಲಿ ಎಕ್ಸೆಲ್ ಶೂಟಿಂಗ್ ಎಂಬ ಶೂಟಿಂಗ್ ಕೋಚಿಂಗ್ ಸೆಂಟರ್ ಅನ್ನು ಸ್ಥಾಪಿಸಿದ್ದರು. ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಮೊನಾಲಿ ಮತ್ತು ಅವರ ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!

ಸರ್ಕಾರ ಕೇವಲ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ: ದೆಹಲಿ ದಮನಕಾರಿ ಕ್ರಮ ಬೆಂಬಲಿಸಿದ ಸಚಿವ ಪ್ರಹ್ಲಾದ್ ಜೋಶಿ