ಕ್ರೀಡೆ

ತಾಲಿಬಾನ್ ಗಳಿಂದ ವಾಲಿಬಾಲ್ ಆಟಗಾರ್ತಿಯ ಬರ್ಬರ ಹತ್ಯೆ!

Lingaraj Badiger

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗಳ ಮತ್ತೊಂದು ಅಟ್ಟಹಾಸ ಬೆಳಕಿಗೆ ಬಂದಿದೆ. ವಾಲಿಬಾಲ್ ತಂಡದ ಆಟಗಾರ್ತಿಯನ್ನು
ಬರ್ಬರವಾಗಿ ಹತ್ಯೆ ಮಾಡಿರುವ ವಿಚಾರ ಬಟಾಬಯಲಾಗಿದೆ. ಅಫ್ಘಾನಿಸ್ತಾನ ಜ್ಯೂನಿಯರ್ ತಂಡದಲ್ಲಿ ಆಡುತ್ತಿದ್ದ ಮೆಹಜಬೀನ್ ಹಕಿಮಿ, ಹತ್ಯೆಗೀಡಾದ ಆಟಗಾರ್ತಿ ಎಂದು ತಿಳಿದುಬಂದಿದೆ.

ಆಗಸ್ಟ್ 15ರ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ನಡೆಸುತ್ತಿದೆ. ತಾಲಿಬಾನ್ ಅಧಿಕಾರಕ್ಕೆ ಬಂದ ಮೇಲೆ ಸ್ಪೋರ್ಟ್ಸ್ ಗಳಿಗೆ ವಿಶೇಷವಾಗಿ ಮಹಿಳೆಯರ ಕ್ರೀಡೆಗಳಿಗೆ ಕಠಿಣ ನಿರ್ಬಂಧ ವಿಧಿಸಲಾಗಿದೆ. ಹೆಸರು ಹೇಳಲಿಚ್ಛಿಸದ ತರಬೇತುದಾರರೊಬ್ಬರು, ಅಕ್ಟೋಬರ್ ತಿಂಗಳ ಆರಂಭದಲ್ಲಿ ಮೆಹಜಬೀನ್ ಹಕಿಮಿ ಎಂಬ ಫುಟ್ಬಾಲ್ ಆಟಗಾರ್ತಿಯನ್ನು ತಾಲಿಬಾನಿಗಳು ಶಿರಚ್ಛೇದ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದ್ರೂ ಈ ವಿಚಾರ ಬೆಳಕಿಗೆ ಬಂದಿಲ್ಲ. ಏಕೆಂದರೆ ಈ ಭೀಕರ ಹತ್ಯೆಯ ಬಗ್ಗೆ ಅಫ್ಘಾನಿಸ್ತಾನದಲ್ಲಿ ಬಾಯ್ಬಿಡುವಂತಿರಲಿಲ್ಲ.

ಈ ಹಿಂದೆ ಅಶ್ರಫ್ ಘನಿ ಸರ್ಕಾರ ಪಥನವಾಗುವುದಕ್ಕೂ ಮುನ್ನ, ಆಟಗಾರ್ತಿ ಮೆಹಜಬೀನ್ ಕಾಬೂಲ್ ಮುನ್ಸಿಪಾಲ್ಟಿ ವಾಲಿಬಾಲ್ ಕ್ಲಬ್ ಪರವಾಗಿ ಆಡುತ್ತಿದ್ದರು. ಮೆಹಜಬೀನ್ ಹಕಿಮಿ ಕಾಬೂಲ್ ನಲ್ಲಿ ಸ್ಟಾರ್ ಆಟಗಾರ್ತಿಯಾಗಿದ್ದಳು. ಕೆಲ ದಿನಗಳ ನಂತರ ಅವಳ ಶಿರಚ್ಛೇದ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ ತೊಡಗಿತು. ಸದ್ಯ ಈ ವಿಚಾರವನ್ನು ತರಬೇತುದಾರರೊಬ್ಬರು ಬಾಯ್ಬಿಟ್ಟಿದ್ದು, ಈಗಾಗಲೇ ಹಲವು ಮಹಿಳಾ ಕ್ರೀಡಾಪಟುಗಳು ಅಫ್ಘಾನಿಸ್ತಾನದಿಂದ ಪಲಾಯನಗೈದಿದ್ದಾರೆ. ಉಳಿದ ಕೆಲವರು ಅಫ್ಘಾನಿಸ್ತಾನದಲ್ಲಿ ಭಯದಿಂದ ಜೀವನ ಸಾಗಿಸುತ್ತಿದ್ದಾರೆ.

SCROLL FOR NEXT