ಕ್ರೀಡೆ

ಅತೀ ಹೆಚ್ಚು ಗೋಲು: ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೋ ರೊನಾಲ್ಡೋ

Srinivasamurthy VN

ಪ್ಯಾರಿಸ್: ಫುಟ್ ಬಾಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತೊಂದು ಸರ್ವಕಾಲಿಕ ವಿಶ್ವದಾಖಲೆ ನಿರ್ಮಿಸಿದ್ದು, ಜಗತ್ತಿನಲ್ಲೇ ಅತೀ ಹೆಚ್ಚು ಗೋಲ್ ಭಾರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ವಿಶ್ವಕಪ್ ಫುಟ್ ಬಾಲ್ ಟೂರ್ನಿಯ ಕ್ವಾಲಿಫೈಯಿಂಗ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಪೋರ್ಚುಗಲ್ ತಂಡ 2-1 ಅಂತರದ ಗೋಲುಗಳ ಜಯಭೇರಿ ಭಾರಿಸಿದ್ದು, ಈ ಪಂದ್ಯದಲ್ಲಿ ಗೋಲು ಭಾರಿಸಿದ ರೊನಾಲ್ಡೋ ಅಲಿ ಡೇಯಿ (109) ಅವರನ್ನು ಹಿಂದಿಕ್ಕಿದರು. ರೊನಾಲ್ಡೋಗೆ ಇದು 110ನೇ ಅಂತಾರಾಷ್ಟ್ರೀಯ ಗೋಲ್ ಆಗಿತ್ತು. 

36 ವರ್ಷದ ರೊನಾಲ್ಡೋ ಜಾವೋ ಮಾರಿಯೋ ಪಾಸ್ ಮಾಡಿದ ಚೆಂಡನ್ನು ಬಲವಾಗಿ ಹೆಡ್ ಮಾಡುವ ಮೂಲಕ ಗೋಲ್ ಗಳಿಸಿದರು. 

ಅಂತೆಯೇ ರೊನಾಲ್ಡೋ ತಮ್ಮ 47 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 49 ಗೋಲುಗಳನ್ನು ಗಳಿಸಿದ್ದಾರೆ. ಅಲ್ಲದೆ ಪೋರ್ಚುಗಲ್ ತಂಡದ ಪರ ಅತೀಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 

ಇನ್ನು ಈ ಪಂದ್ಯದ ಗೆಲುವಿನ ಮೂಲಕ ಪೋರ್ಚುಗಲ್ ತಂಡ ತನ್ನ ಅಂಕಗಳನ್ನು 10ಕ್ಕೇರಿಸಿಕೊಂಡಿದೆ.

SCROLL FOR NEXT