ಹರ್ವಿಂದರ್ ಸಿಂಗ್ 
ಕ್ರೀಡೆ

ಟೋಕಿಯೊ ಪ್ಯಾರಾಲಿಂಪಿಕ್ಸ್: ಅರ್ಚರಿಯಲ್ಲಿ ಭಾರತಕ್ಕೆ ಮೊದಲ ಪದಕ, ಕಂಚು ಗೆದ್ದ ಹರ್ವಿಂದರ್ ಸಿಂಗ್ 

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಅರ್ಚರಿಯಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ. ಶುಕ್ರವಾರ ನಡೆದ ಪುರುಷರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾದ ಕಿಮ್ ಮಿನ್ ಸು ವಿರುದ್ಧ  ಗೆಲುವು ಸಾಧಿಸಿದ ಹರ್ವಿಂದರ್ ಸಿಂಗ್ ಕಂಚಿನ ಪದಕ ಗಳಿಸಿದರು.

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಅರ್ಚರಿಯಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ. ಶುಕ್ರವಾರ ನಡೆದ ಪುರುಷರ ವೈಯಕ್ತಿಕ ರಿಕರ್ವ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾದ ಕಿಮ್ ಮಿನ್ ಸು ವಿರುದ್ಧ  ಗೆಲುವು ಸಾಧಿಸಿದ ಹರ್ವಿಂದರ್ ಸಿಂಗ್ ಕಂಚಿನ ಪದಕ ಗಳಿಸಿದರು.

ಸೆಮಿ ಫೈನಲ್ ನಲ್ಲಿ ಅಮೆರಿಕದ ಕೆವಿನ್ ಮಥರ್ ಎದುರು 6-4 ಅಂತರದಿಂದ ಸೋತ ಸಿಂಗ್, ಕೊರಿಯಾದ ಕಿಮ್ ಮಿನ್ ಸು ವಿರುದ್ಧ 6-5 ಅಂತರದ ಗೆಲುವು ಸಾಧಿಸಿದರು.

ಸೆಮಿ ಫೈನಲ್ ನಲ್ಲಿ ಸಿಂಗ್ ಎದುರು ಗೆಲುವು ಸಾಧಿಸಿದ ಮಥರ್ ಫೈನಲ್ ನಲ್ಲಿ ಚೀನಾದ ಝಾವೋ ಎಲ್ ಎದುರು 6-4 ಅಂತರದಿಂದ ಗೆದ್ದು ಚಿನ್ನದ ಪದಕ ಗೆದ್ದರು. ವಿಶ್ವದ ನಂಬರ್ 23 ಶ್ರೇಯಾಂಕದ ಸಿಂಗ್ 2018ರಲ್ಲಿ ನಡೆದ ಏಷ್ಯಾನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದಿದ್ದರು.

ಪಾಟಿಯಾಲಾದ ಪಂಜಾಬ್ ವಿವಿಯ ಅರ್ಥಶಾಸ್ತ್ರದಲ್ಲಿ ಸ್ಕಾಲರ್ ಆಗಿರುವ ಸಿಂಗ್, ಮಧ್ಯಮ ಕುಟುಂಬದಿಂದ ಬಂದಿದ್ದಾರೆ.ಕೇವಲ ಒಂದೂವರೆ ವರ್ಷವಿದ್ದಾಗ ಡೆಂಘೀ ತಗುಲಿತ್ತು. ಆಗ ಸ್ಥಳೀಯ ವೈದ್ಯರು ವ್ಯತಿರಿಕ್ತವಾದ ಇಂಜೆಕ್ಷನ್ ನೀಡಿದ್ದರಿಂದ ಅವರು ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್