ಕ್ರೀಡೆ

ಭಾರತದ ಕ್ರೀಡಾ ಇತಿಹಾಸದಲ್ಲಿಯೇ ಟೋಕಿಯೊ ಪ್ಯಾರಾಲಿಂಪಿಕ್ಸ್ ಗೆ ವಿಶೇಷ ಸ್ಥಾನ: ಪ್ರಧಾನಿ ಮೋದಿ

Harshavardhan M

ನವದೆಹಲಿ: ಭಾರತೀಯ ಕ್ರೀಡಾಪಟುಗಳು ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಅಪ್ರತಿಮ ಸಾಧನೆ ತೋರಿರುವುದನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಭಾರತದ ಕ್ರೀಡಾ ಇತಿಹಾಸದಲ್ಲಿಯೇ ಈ ಕ್ರೀಡಾಕೂಟ ವಿಶೇಷ ಸ್ಥಾನ ಪಡೆಯಲಿದೆ ಎಂಡು ಅವರು ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ ಜಪಾನ್ ಸರ್ಕಾರದ ಆತಿಥ್ಯವನ್ನೂ ಮೋದಿ ಪ್ರಶಂಸಿಸಿದ್ದಾರೆ. 

ಕ್ರೀಡಾಕೂಟದಲ್ಲಿ ಒಟ್ಟು 19 ಪದಕಗಳನ್ನು ಗೆದ್ದುಕೊಂಡ ಭಾರತ ಪದಕ ಪಟ್ಟಿಯಲ್ಲಿ 24ನೇ ಸ್ಥಾನ ಪಡೆದುಕೊಂಡ ಬೆನ್ನಲ್ಲೇ ಮೋದಿ ಕ್ರೀಡಾಕೂಟದಲ್ಲಿ ಪಾಲ್ಗೊಂದ ಕ್ರೀಡಾಪಟುಗಳನ್ನು ಶ್ಲಾಘಿಸಿದ್ದಾರೆ. ಇದುವರೆಗಿನ ಇತಿಹಾಸದಲ್ಲಿ ಪದಕ ಪಟ್ಟಿಯಲ್ಲಿ ಭಾರತ ಪಡೆದ ಅತ್ಯಧಿಕ ಸ್ಥಾನ ಇದಾಗಿದೆ.

5 ಚಿನ್ನದ ಪದಕಗಳು, 8 ಬೆಳ್ಳಿ ಮತ್ತು 6 ಕಂಚು ಪದಕಗಳನ್ನು ಭಾರತ ಈ ಬಾರಿ ಗೆದ್ದುಕೊಂಡಿದೆ. ಕ್ರೀಡಾಪಟುಗಳ ತರಬೇತುದಾರರು ಹಾಗೂ ಅವರ ಕುಟುಂಬಸ್ಥರಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

SCROLL FOR NEXT