ಕ್ರೀಡೆ

ಯುಎಸ್ ಓಪನ್ 2021: ಮೊದಲ ಗ್ರ್ಯಾಂಡ್ ಸ್ಲಾಮ್ ಗೆದ್ದ ಡ್ಯಾನಿಲ್ ಮೆಡ್ವೆಡೆವ್, ನೊವಾಕ್ ಜೊಕೊವಿಕ್ ವಿರುದ್ಧ ಗೆಲುವು

Sumana Upadhyaya

ನ್ಯೂಯಾರ್ಕ್: ಯುಎಸ್ ಓಪನ್ ಅಂತಿಮ ಪಂದ್ಯದಲ್ಲಿ ನೊವಾಕ್ ಜೊಕೊವಿಚ್ ಅವರ ಗ್ರ್ಯಾಂಡ್ ಸ್ಲಾಮ್ ಕನಸನ್ನು ಡ್ಯಾನಿಲ್ ಮೆಡ್ವೆಡೆವ್ ಭಾನುವಾರ ಭಗ್ನಗೊಳಿಸಿದ್ದಾರೆ.

ನ್ಯೂಯಾರ್ಕ್ ನಲ್ಲಿ ನಿನ್ನೆ ಮುಕ್ತಾಯವಾದ ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ನೇರ ಸೆಟ್ ಗಳ ಗೆಲುವಿನೊಂದಿಗೆ ಡ್ಯಾನಿಲ್ ಮೆಡ್ವೆಡೆವ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ರಷ್ಯಾದ ಎರಡನೇ ರ್ಯಾಂಕಿನ ಆಟಗಾರ ಮೆಡ್ವೆಡೆವ್  ಜೊಕೊವಿಚ್ ವಿರುದ್ಧ 6-4, 6-4, 6-4 ನೇರ ಸೆಟ್ ಗಳ ಅಂತರದಿಂದ ಸೋಲಿಸಿದ್ದಾರೆ.

ಈ ಮೂಲಕ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಜೊತೆಯಲ್ಲಿ ವೃತ್ತಿಜೀವನದಲ್ಲಿ ಗ್ರ್ಯಾಂಡ್ ಸ್ಲಾಮ್  ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನೊವಾಕ್ ಅಭಿಮಾನಿಗಳೇ ಕ್ಷಮಿಸಿ, ಅವರ ಇಷ್ಟು ವರ್ಷದ ವೃತ್ತಿಜೀವನದಲ್ಲಿ ಅದ್ಭುತ ಆಟವಾಡಿ ತೋರಿಸಿದ್ದಾರೆ. ಇತಿಹಾಸ ಕಂಡ ಶ್ರೇಷ್ಟ ಟೆನಿಸ್ ಆಟಗಾರ ಎಂದು ಪಂದ್ಯ ಮುಕ್ತಾಯ ನಂತರ ಮೆಡ್ವೆಡೆವ್ ಪ್ರತಿಕ್ರಿಯಿಸಿದ್ದಾರೆ.

2019ರ ಯುಎಸ್ ಏಪನ್ ರನ್ನರ್ ಅಪ್ ಆಗಿದ್ದ ಮೆಡ್ವೆಡೆವ್ ತಮ್ಮ ಮೂರನೇ ಗ್ರ್ಯಾಂಡ್ ಸ್ಲಾಮ್ ನ ಕೊನೆಯಲ್ಲಿ ಮೊದಲ ಗ್ರ್ಯಾಂಡ್ ಸ್ಲಾಮ್ ನ್ನು ಪಡೆದುಕೊಂಡಿದ್ದಾರೆ. ಮೆಡ್ವೆಡೆವ್, 2019 ಯುಎಸ್ ಓಪನ್ ರನ್ನರ್ ಅಪ್, ತನ್ನ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತನ್ನ ಮೂರನೇ ಸ್ಲಾಮ್ ಫೈನಲ್ ನಲ್ಲಿ ಪಡೆದುಕೊಂಡಿದ್ದಾರೆ. ಫೆಬ್ರವರಿಯ ಆಸ್ಟ್ರೇಲಿಯನ್ ಓಪನ್ ಫೈನಲ್ ನ ಮರು ಪಂದ್ಯದಲ್ಲಿ, 34 ವರ್ಷದ ಸೆರ್ಬಿಯನ್ ನೇರ ಸೆಟ್ ಗಳಲ್ಲಿ ಗೆದ್ದು ತನ್ನ ಗ್ರ್ಲಾಂಡ್ ಸ್ಲಾಮ್ ನ್ನು ಗಿಟ್ಟಿಸಿಕೊಂಡಿದ್ದಾರೆ.

SCROLL FOR NEXT