ಜೂಡೋ ತಾರೆ ಸುಶೀಲಾ 
ಕ್ರೀಡೆ

ಕಾಮನ್ವೆಲ್ತ್ ಗೇಮ್ಸ್ 2022: ಭಾರತಕ್ಕೆ ಮತ್ತೊಂದು ಪದಕ; ಬೆಳ್ಳಿ ಗೆದ್ದ ಜೂಡೋ ತಾರೆ ಸುಶೀಲಾ

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದೂವರೆದಿದ್ದು, ನಾಲ್ಕನೇ ದಿನವಾದ ಸೋಮವಾರ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಜೂಡೋ ತಾರೆ ಎಲ್.ಸುಶೀಲಾ ದೇವಿ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ.

ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದೂವರೆದಿದ್ದು, ನಾಲ್ಕನೇ ದಿನವಾದ ಸೋಮವಾರ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಜೂಡೋ ತಾರೆ ಎಲ್.ಸುಶೀಲಾ ದೇವಿ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ.

ಮಣಿಪುರದ 27 ವರ್ಷದ ಸುಶೀಲಾ ದೇವಿ ಅವರು ಚಿನ್ನದ ಪದಕಕ್ಕಾಗಿ ಇಂದು ನಡೆದ ಜೂಡೋ  ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್‌ಬೂಯಿ ವಿರುದ್ಧ ಸೋತಿದ್ದಾರೆ. ಈ ಮೂಲಕ ಸುಶೀಲಾ ದೇವಿ ಅವರು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ.

ಸುಶೀಲಾ ದೇವಿ ಅವರ ಈ ಸಾಧನೆಯೊಂದಿಗೆ ಭಾರತ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚು ಸಹಿತ ಏಳು ಪದಕಗಳನ್ನು ಪಡೆದುಕೊಂಡಿದೆ.

ಮಣಿಪುರ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿರುವ ಸುಶೀಲಾ ದೇವಿ ಇದಕ್ಕೂ ಮೊದಲು ಮಲಾವಿಯ ಹ್ಯಾರಿಯೆಟ್ ಬೋನ್‌ಫೇಸ್ ವಿರುದ್ಧ ಜಯ ಗಳಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಸೆಮಿ ಫೈನಲ್‌ನಲ್ಲಿ ಮಾರಿಷಸ್‌ನ ಪ್ರಿಸ್ಸಿಲ್ಲಾ ಮೊರಾಂಡ್ ಅವರನ್ನು ಸೋಲಿಸಿ ಫೈನಲಿಗೆ ತಲುಪಿದ್ದರು. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್