ಕ್ರೀಡೆ

ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಅಂತಿಮ ಪ್ರಶಸ್ತಿ ಸುತ್ತಿಗೆ ಪಿ ವಿ ಸಿಂಧು ಲಗ್ಗೆ

Sumana Upadhyaya

ಸಿಂಗಾಪುರ: ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತದ ಶಟ್ಲರ್‌ ಪಿವಿ ಸಿಂಧು ಜಪಾನಿನ ಕೆಳ ಶ್ರೇಯಾಂಕದ ಸೈನಾ ಕವಾಕಮಿ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಈ ವರ್ಷ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಮತ್ತು ಸ್ವಿಸ್ ಓಪನ್‌ನಲ್ಲಿ ಎರಡು ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿದ್ದ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು, ಇಂದು ಮುಕ್ತಾಯಗೊಂಡ 32 ನಿಮಿಷಗಳ ಸೆಮಿಫೈನಲ್ ಹಣಾಹಣಿಯಲ್ಲಿ 21-15 21-7 ರಿಂದ ಮೇಲುಗೈ ಸಾಧಿಸಿದರು. 2022 ರ ಈ ವರ್ಷದಲ್ಲಿ ತನ್ನ ಮೊದಲ ಸೂಪರ್ 500 ಪ್ರಶಸ್ತಿಯ ಗೆಲುವಿಗೆ ಒಂದು ಅಂತರದಲ್ಲಿದ್ದಾರೆ. 

2018 ರ ಚೀನಾ ಓಪನ್‌ನಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಿದ ಸಿಂಧು 2-0 ದಾಖಲೆಯೊಂದಿಗೆ ಪಂದ್ಯಕ್ಕೆ ಇಳಿದರು. ಮಾಜಿ ವಿಶ್ವ ಚಾಂಪಿಯನ್ ಸಿಂಧು, ವಿಶ್ವದ 38ನೇ ಶ್ರೇಯಾಂಕದ ಸೈನಾ ಕವಾಕಮಿ ವಿರುದ್ಧ ಸಂಪೂರ್ಣ ಹಿಡಿತ ತೋರಿದರು.

SCROLL FOR NEXT