ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

'ಮೂಗುತಿ ಸುಂದರಿ' ಸಾನಿಯಾಗೆ ಹುಟ್ಟಹಬ್ಬದ ಸಂಭ್ರಮ: ವಿಚ್ಚೇದನ ವದಂತಿ ನಡುವೆ ಶುಭ ಕೋರಿದ ಶೋಯೆಬ್ ಮಲ್ಲಿಕ್

ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಹಾಗೂ ಆಕೆಯ ಪತಿ ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲ್ಲಿಕ್ ತಮ್ಮ 12 ವರ್ಷದ ದಾಂಪತ್ಯ ಜೀವನವನ್ನು ಮುರಿದುಕೊಂಡು ಬೇರೆ ಬೇರೆಯಾಗಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು.

ಶೋಯೆಬ್ ಮಲ್ಲಿಕ್, ಸಾನಿಯಾ ಮಿರ್ಜಾ
Nagaraja AB
Updated On : 15 Nov 2022, 2:16 pm

ನವದೆಹಲಿ: ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಹಾಗೂ ಆಕೆಯ ಪತಿ ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲ್ಲಿಕ್ ತಮ್ಮ 12 ವರ್ಷದ ದಾಂಪತ್ಯ ಜೀವನವನ್ನು ಮುರಿದುಕೊಂಡು ಬೇರೆ ಬೇರೆಯಾಗಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಈ ವದಂತಿಗಳ ನಡುವೆ ಸಾನಿಯಾ ಮಿರ್ಜಾ ಇಂದು 36 ವರ್ಷದ ಹುಟ್ಟಹಬ್ಬ ಆಚರಿಸುತ್ತಿದ್ದು, ಶೋಯೆಬ್ ಮಲ್ಲಿಕ್ ಕೂಡಾ ಶುಭ ಹಾರೈಸಿದ್ದಾರೆ. 

ಹುಟ್ಟುಹಬ್ಬದ ಶುಭಾಶಯಗಳು ಸಾನಿಯಾ ಮಿರ್ಜಾ. ಅತ್ಯಂತ ಆರೋಗ್ಯಕರ ಮತ್ತು ಸಂತೋಷದ ಜೀವನ ನಿನ್ನದಾಗಲಿ, ಹುಟ್ಟುಹಬ್ಬದ ದಿನವನ್ನು ಎಂಜಾಯ್ ಮಾಡು ಎಂದು ಶೋಯೆಬ್ ಮಲ್ಲಿಕ್ ಟ್ವೀಟ್ ಮಾಡಿದ್ದಾರೆ. 

ಇದನ್ನೂ ಓದಿ: ಮುರಿದು ಬಿತ್ತು 'ಮೂಗುತಿ ಸುಂದರಿ'ಯ 12 ವರ್ಷಗಳ ದಾಂಪತ್ಯ: ಸಾನಿಯಾ ಮಿರ್ಜಾ ಸಂಸಾರದಲ್ಲಿ ಹುಳಿ ಹಿಂಡಿದ ಆಯೆಷಾ ಒಮರ್ ಯಾರು?

Advertisement

Advertisement

2010ರಲ್ಲಿ ಮದುವೆಯಾಗಿದ್ದ ಸಾನಿಯಾ ಮತ್ತು ಶೋಯೆಬ್ ಮಲ್ಲಿಕ್ ದಂಪತಿಗೆ ಒಬ್ಬ ಮಗನಿದ್ದಾನೆ. ಇವರ ವಿಚ್ಚೇದನ ಕುರಿತ ವದಂತಿ ಇತ್ತೀಚಿಗೆ ಹಬ್ಬಿತ್ತು. ಈ ಮಧ್ಯೆ ಸಾನಿಯಾ ಮಿರ್ಜಾ ಮಾಡಿದ ಟ್ವೀಟ್ ಕೂಡಾ ಇದನ್ನು ಪುಷ್ಟೀಕರಿಸುವಂತಿತ್ತು. ಆದರೆ, ಈಗ ಶೋಯೆಬ್ ಮಲ್ಲಿಕ್ ಮಾಡಿರುವ ಟ್ವೀಟ್, ವಿಚ್ಚೇದನ ಕುರಿತು ಅನುಮಾನ ಹುಟ್ಟಿಸಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments