ಕ್ರೀಡೆ

ಫಿಫಾ ವಿಶ್ವಕಪ್ 2022 ಗೆ ವರ್ಣರಂಜಿತ ಚಾಲನೆ; ಕತಾರ್ ವಿರುದ್ಧ 2-0 ಗೋಲುಗಳೊಂದಿಗೆ ಈಕ್ವೆಡಾರ್ ಶುಭಾರಂಭ

Nagaraja AB

ದೋಹಾ: ಫಿಫಾ ವಿಶ್ವಕಪ್ 2022ಕ್ಕೆ ಭಾನುವಾರ ಅದ್ದೂರಿ ಚಾಲನೆ ದೊರೆತಿದೆ. ಕತಾರ್ ನ ಅಲ್ ಖೋರಾ ಮೈದಾನದಲ್ಲಿ ವರ್ಣರಂಜಿತ ಸಮಾರಂಭದೊಂದಿಗೆ ಫಿಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿ ಆರಂಭವಾಯಿತು. 

ಕತಾರ್‌ ದೊರೆ  ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರು ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫಾಂಟಿನೊ, ಮತ್ತಿತರ ಇತರ ಅರಬ್ ನಾಯಕರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಮೆರಿಕಾದ ನಟ ಮೋರ್ಗಾನ್ ಫ್ರೀಮಾನ್ ಮತ್ತಿತರಿಂದ ಮೂರು ಗಂಟೆಗಳ ಕಾಲ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು. 

ಸೌದಿ ಅರೇಬಿಯಾದ ರಾಜ, ಈಜಿಪ್ಟ್, ಟರ್ಕಿ ಮತ್ತು ಅಲ್ಜೀರಿಯಾದ ಅಧ್ಯಕ್ಷರು, ಹಾಗೆಯೇ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತಿತರರು ಈಕ್ವೆಡಾರ್ ನಡುವಿನ ಮೊದಲ ಪಂದ್ಯಕ್ಕೂ ಮುಂಚಿತವಾಗಿ ಕ್ರೀಡಾಂಗಣದಲ್ಲಿ ಆಸನರಾಗಿದ್ದರು.

ಕತಾರ್- ಈಕ್ವೆಡಾರ್ ನಡುವೆ ನಡೆದ ಉದ್ಘಾಟನಾ ಪಂದ್ಯದಲ್ಲಿ ವಿರಾಮದ ವೇಳೆಗೆ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದ ಈಕ್ವೆಡಾರ್, ಎನ್ನರ್ ವೇಲೆನ್ಸಿಯಾ ಬ್ರೇಸ್ ಅವರ  ಎರಡು ಗೋಲುಗಳಿಂದ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿತು.

SCROLL FOR NEXT