ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಭಿಮಾನಿಯೊಂದಿಗೆ ಘರ್ಷಣೆ: ಕ್ರಿಸ್ಟಿಯಾನೋ ರೊನಾಲ್ಡೊಗೆ ದಂಡ; 2 ಪಂದ್ಯಗಳಿಗೆ ನಿಷೇಧ

ಮ್ಯಾಂಚೆಸ್ಟರ್ ನ ಮಾಜಿ ಕ್ರೀಡಾಪಟು ಕ್ರಿಸ್ಟಿಯಾನೋ ರೆನಾಲ್ಡೋ ಅಭಿಮಾನಿಯೊಂದಿಗೆ ದುರ್ವರ್ತನೆ ತೋರಿದ್ದಕ್ಕಾಗಿ 50,000 ಪೌಂಡ್ ಗಳಷ್ಟು ದಂಡ ವಿಧಿಸಲಾಗಿದ್ದು 2 ಪಂದ್ಯಗಳಿಗೆ ನಿಷೇಧಿಸಲಾಗಿದೆ.

ರೊನಾಲ್ಡೋ
Srinivas Rao BV
Updated On : 26 Nov 2022, 8:34 pm

ಲಂಡನ್: ಮ್ಯಾಂಚೆಸ್ಟರ್ ನ ಮಾಜಿ ಕ್ರೀಡಾಪಟು ಕ್ರಿಸ್ಟಿಯಾನೋ ರೆನಾಲ್ಡೋ ಅಭಿಮಾನಿಯೊಂದಿಗೆ ದುರ್ವರ್ತನೆ ತೋರಿದ್ದಕ್ಕಾಗಿ 50,000 ಪೌಂಡ್ ಗಳಷ್ಟು ದಂಡ ವಿಧಿಸಲಾಗಿದ್ದು 2 ಪಂದ್ಯಗಳಿಗೆ ನಿಷೇಧಿಸಲಾಗಿದೆ.

ಕಳೆದ ಸೆಷನ್ ನ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಅಭಿಮಾನಿಯೊಬ್ಬರ ಫೋನ್ ನ್ನು ಕಸಿದು ಎಸೆದದ್ದಕ್ಕೆ ಈ ದಂಡ, ನಿಷೇಧ ವಿಧಿಸಲಾಗಿದೆ.

ಇದನ್ನೂ ಓದಿ: ಮ್ಯಾಂಚೆಸ್ಟರ್ ಯುನೈಟೆಡ್ ತೊರೆದ ರೊನಾಲ್ಡೊ! ಅಭಿಮಾನಿಗಳಿಗೆ ದೊಡ್ಡ ಶಾಕ್

Advertisement

Advertisement

ಯಾವುದೇ ದೇಶದಲ್ಲಿ ರೊನಾಲ್ಡೋ ಬೇರೆ ಯಾವುದೇ ಕ್ಲಬ್ ಗೆ ಸೇರಿದರೂ ಈ ನಿಷೇಧ ಅಲ್ಲಿಯೂ ಅನ್ವಯಿಸಲಿದೆ. ಆದರೆ ವಿಶ್ವಕಪ್ ಗೆ ಮಾತ್ರ ಈ ನಿಷೇಧ ಅನ್ವಯಿಸುವುದಿಲ್ಲ. ಕ್ರಿಸ್ಟಿಯಾನೊ ರೊನಾಲ್ಡೊ ನ.22 ರಂದು ತಕ್ಷಣದಿಂದಲೇ ಜಾರಿಯಾಗುವಂತೆ  ಮ್ಯಾಂಚೆಸ್ಟರ್‌ ಯುನೈಟೆಡ್‌ ಪ್ರೀಮಿಯರ್ ಲೀಗ್ ತಂಡ ತೊರೆದಿದ್ದಾರೆ ಎಂದು ತಂಡ ಹೇಳಿತ್ತು.

ಇಂಗ್ಲೆಂಡ್ ನ ಫುಟ್ಬಾಲ್ ಸಂಘ ರೆನಾಲ್ಡೋ ಅವರ ದುರ್ವರ್ತನೆಗೆ ಈ ದಂಡ ವಿಧಿಸಿದೆ ಎಂದು ಎಫ್ಎ ಹೇಳಿಕೆಯಲ್ಲಿ ತಿಳಿಸಿದೆ. ಎಫ್.ಎ ಆರೋಪಗಳನ್ನು ರೆನಾಲ್ಡೋ ಒಪ್ಪಿದ್ದು, ವೈಯಕ್ತಿಯ ವಿಚಾರಣೆಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement