ಕತಾರ್ ತಂಡ 
ಕ್ರೀಡೆ

ಫಿಫಾ ಫುಟ್ಬಾಲ್ ವಿಶ್ವಕಪ್: ಟೂರ್ನಿಯಿಂದ ಅತಿಥೇಯ ಕತಾರ್ ಔಟ್, ಜಗತ್ತಿನ ಮೊದಲ ತಂಡ!

ಹಾಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಸತತ ಎರಡು ಸೋಲು ಕಾಣುವ ಮೂಲಕ ಆತಿಥೇಯ ಕತಾರ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.

ದೋಹಾ: ಹಾಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಸತತ ಎರಡು ಸೋಲು ಕಾಣುವ ಮೂಲಕ ಆತಿಥೇಯ ಕತಾರ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.

ಟೂರ್ನಿ ಆರಂಭವಾದ ಕೇವಲ ಆರು ದಿನಗಳ ಅಂತರದಲ್ಲಿ ಅತಿಥೇಯ ಕತಾರ್ ಟೂರ್ನಿಯಿಂದ ಹೊರ ಬಿದ್ದಿರುವುದು ಸ್ಥಳೀಯ ಕ್ರೀಡಾಭಿಮಾನಿಗಳಿಗೆ ತೀವ್ರ ನಿರಾಸೆ ತಂದಿದೆ. ಶುಕ್ರವಾರ ಆರಂಭಿಕ ಪಂದ್ಯದಲ್ಲಿ ಈಕ್ವೆಡಾರ್ ಮತ್ತು ಸೆನೆಗಲ್ ವಿರುದ್ಧ ಸೋತ ನಂತರ ಕತಾರ್ ನಾಕೌಟ್ ಸುತ್ತಿಗೆ ಮುನ್ನಡೆಯುವಲ್ಲಿ ವಿಫಲವಾಗಿದೆ.

'ಜಗತ್ತಿನ ಮೊದಲ ತಂಡ'
ಇನ್ನು ಈ ಹೀನಾಯ ಸೋಲಿನ ಮೂಲಕ ಕತಾರ್ ತಂಡ ಫುಟ್ಬಾಲ್ ಜಗತ್ತು ಈ ಹಿಂದೆಂದೂ ನೋಡಿರದ ಹೀನಾಯ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದು, ಆತಿಥೇಯ ತಂಡವೊಂದು ಒಂದೇ ಗುಂಪಿನಲ್ಲಿ ಸತತ 2 ಪಂದ್ಯ ಸೋತ ಮೊದಲ ಉದಾಹರಣೆ ಇದಾಗಿದೆ. ವಿಶ್ವಕಪ್‌ನ 92 ವರ್ಷಗಳ ಇತಿಹಾಸದಲ್ಲಿ ಆತಿಥೇಯ ರಾಷ್ಟ್ರದ ಆರಂಭಿಕ ನಿರ್ಗಮನವಾಗಿದೆ. 

ಕತಾರ್ ನಿರ್ಗಮನ ಖಚಿತ ಪಡಿಸಿದ ನೆದರ್ಲೆಂಡ್ಸ್ ಮತ್ತು ಈಕ್ವೆಡಾರ್ ಪಂದ್ಯ
ಇನ್ನು ಎ ಗುಂಪಿನ ಮತ್ತೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್ ಮತ್ತು ಈಕ್ವೆಡಾರ್  ನಡುವಿನ ಪಂದ್ಯ 1-1 ಗೋಲುಗಳಿಂದ ಡ್ರಾ ಸಾಧಿಸಿತು. ಆ ಮೂಲಕ ಅಧಿಕೃತವಾಗಿ ಕತಾರ್ ತಂಡವನ್ನು ಟೂರ್ನಿಯಿಂದ ಹೊರದಬ್ಬಿದಂತಾಗಿದೆ. ಕತಾರ್ ಮಂಗಳವಾರ ನೆದರ್ಲೆಂಡ್ಸ್ ವಿರುದ್ಧ ಇನ್ನೂ ಒಂದು ಪಂದ್ಯವನ್ನು ಆಡಲು ಬಾಕಿ ಇದ್ದು, ಇದು ಕೇವಲ ಔಪಚಾರಿಕ ಪಂದ್ಯವಾಗಿರಲಿದೆ. 

ಕತಾರ್ ಈ ಹಿಂದೆ ಪಂದ್ಯಾವಳಿಯ ಆರಂಭಿಕ ಪಂದ್ಯವನ್ನು ಸೋತ ಮೊದಲ ಅತಿಥೇಯ ತಂಡ ಎಂಬ ಅನಪೇಕ್ಷಿತ ದಾಖಲೆಗೂ ಕಾರಣವಾಗಿತ್ತು. ಈ ಹಿಂದೆ 2010 ರಲ್ಲಿ ದಕ್ಷಿಣ ಆಫ್ರಿಕಾ ತಂಡವು ಗುಂಪು ಹಂತದಲ್ಲಿ ಹೊರಹಾಕಲ್ಪಟ್ಟ ಏಕೈಕ ಆತಿಥೇಯ ತಂಡವಾಗಿದೆ, ದಕ್ಷಿಣ ಆಫ್ರಿಕನ್ನರು ಕನಿಷ್ಠ ಗೆಲುವಿನೊಂದಿಗೆ ಹೊರನಡೆದಿದ್ದರು. ಅವರ ಬಾಕಿ ಮೂರು ಪಂದ್ಯಗಳು ಡ್ರಾ ಆಗಿತ್ತು.

ಮೊದಲ ವಿಶ್ವಕಪ್‌ಗೆ 220 ಶತಕೋಟಿ ಡಾಲರ್ ಖರ್ಚು ಮಾಡಿರುವ ಕತಾರ್
ಇನ್ನು ಹಾಲಿ ವಿಶ್ವಕಪ್ ಟೂರ್ನಿಯನ್ನು ಕತಾರ್ ನಲ್ಲಿ ಆಯೋಜಿಸಲು ಆ ದೇಶ ಬರೊಬ್ಬರಿ 220 ಶತಕೋಟಿ ಡಾಲರ್ ಖರ್ಚು ಮಾಡಿದೆ. ಆದರೆ ಆ ದೇಶದ ದೊಡ್ಡ ಸಂಪತ್ತು ವಿಶ್ವ ದರ್ಜೆಯ ಸಾಕರ್ ತಂಡವನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದನ್ನು ಈ ಸರಣಿ ಸೋಲು ಸಾಬೀತು ಮಾಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT