ಅಮಾನ್ ಸೆಹ್ರಾವತ್ 
ಕ್ರೀಡೆ

ವಿಶ್ವ ಚಾಂಪಿಯನ್‌ಶಿಪ್‌: ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಅಮನ್ ಸೆಹ್ರಾವತ್!

ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಸ್ಪೇನ್‌ನಲ್ಲಿ ನಡೆದ U23 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ನವದೆಹಲಿ: ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಸ್ಪೇನ್‌ನಲ್ಲಿ ನಡೆದ U23 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. 

ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಫೈನಲ್‌ನಲ್ಲಿ ಟರ್ಕಿಯ ಕುಸ್ತಿಪಟು ಅಹ್ಮತ್ ಡುಮನ್ ವಿರುದ್ಧ 12-4 ಅಂತರದ ಗೆಲುವು ಸಾಧಿಸುವ ಮೂಲಕ 18 ವರ್ಷದ ಆಟಗಾರ ಈ ಅದ್ಭುತ ಸಾಧನೆ ಮಾಡಿದರು. ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ರವಿ ದಹಿಯಾ ಕೂಡ ಈ ಟೂರ್ನಿಯಲ್ಲಿ ಈ ಹಿಂದೆ ಬೆಳ್ಳಿ ಪದಕ ಗೆದ್ದಿದ್ದರು.

ಅಮನ್ ಈ ಮೊದಲು ಪ್ರೀ ಕ್ವಾರ್ಟರ್‌ನಲ್ಲಿ ಶ್ರೀಲಂಕಾದ ಹಂಸನಾ ಮಧುಶಂಕ ಅವರನ್ನು 11-0 ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ತೋಶಿಯಾ ಅಬೆ ವಿರುದ್ಧ 13-2 ರಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಸೆಮಿಫೈನಲ್‌ನಲ್ಲಿ ಅವರು ಕಿರ್ಗಿಸ್ತಾನ್‌ನ ಬೆಕ್‌ಜತ್ ಅಲ್ಮಾಜ್ ಅವರನ್ನು 10-5 ಅಂತರದಿಂದ ಸೋಲಿಸಿ ತಮ್ಮ ಪದಕವನ್ನು ಖಚಿತಪಡಿಸಿದರು. ಇದು U23 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಆರನೇ ಪದಕವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಿತ್ರ..., My Friend... ಎನ್ನುತ್ತಲೇ ಭಾರತದ ಬೆನ್ನಿಗೆ ಚೂರಿ!; US ಸೇನೆ ಜೊತೆ ನಂಟು ಹೊಂದಿದ್ದ ವ್ಯಕ್ತಿ ಈಶಾನ್ಯ ರಾಜ್ಯದಲ್ಲಿ; ದೇಶದ ವಿರುದ್ಧ ಸಂಚು!

ರಾಜ್ಯಾದ್ಯಂತ ಮಳೆ ಆರ್ಭಟ: ಬೆಂಗಳೂರು ಹೈರಾಣ, ಇನ್ನೂ 3 ದಿನ ಮಳೆ ಸಾಧ್ಯತೆ!

'ಭಾರತ ಆಪ್ತ ಸ್ನೆಹಿತ', 'ಪಾಕಿಸ್ತಾನಕ್ಕೆ ತುಂಬಾ ಕೆಟ್ಟದಾಗಿರುತ್ತದೆ': ಆಫ್ಘನ್ ಕ್ರಿಕೆಟಿಗ Allah Ghazanfar ಎಚ್ಚರಿಕೆ

ಲವ್ ಅಲ್ಲ ಅದು 'ಬಲವಂತದ ಮದುವೆ': ಕಾಂಗ್ರೆಸ್‌ ಜತೆ ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ದೇವೇಗೌಡ!

'ಅಶ್ಲೀಲ ಅಲ್ಲ, ಹಾಡನ್ನು Rewrite ಮಾಡ್ತೇನೆ': ನಿರ್ದೇಶಕ Prem ಕ್ಷಮೆಯಾಚನೆ! ನಟಿ ನೋರಾ, ಸಾಹಿತಿ ಅಲಂ ಬಗ್ಗೆಯೂ ಕಿಡಿ! Video

SCROLL FOR NEXT