ಕ್ರೀಡೆ

ಬೆಂಗಳೂರಿನ ಪ್ರಣವ್ ಆನಂದ್ ಭಾರತದ 76ನೇ ಚೆಸ್ ಗ್ರ್ಯಾಂಡ್ ಮಾಸ್ಟರ್

Sumana Upadhyaya

ಚೆನ್ನೈ: ಬೆಂಗಳೂರು ಮೂಲದ ಪ್ರಣವ್ ಆನಂದ್ ಅವರು ರೊಮೇನಿಯಾದ ಮಾಮಿಯಾದಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 2,500 ಎಲೋ ಗಡಿ ದಾಟಿ ಭಾರತದ 76 ನೇ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. 

15 ವರ್ಷದ ಪ್ರಣವ್ ಆನಂದ್, ಈಗಾಗಲೇ GM ಟೈಟಲ್ ಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸಿದ್ದಾರೆ, ಇದೀಗ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. 

GM ಆಗಲು, ಆಟಗಾರನು ಮೂರು GM ಮಾನದಂಡಗಳನ್ನು ಪಡೆದುಕೊಳ್ಳಬೇಕು. 2,500 Elo ಪಾಯಿಂಟ್‌ಗಳ ಲೈವ್ ರೇಟಿಂಗ್ ಅನ್ನು ದಾಟಬೇಕು. ಜುಲೈನಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ 55 ನೇ ಬಿಯೆಲ್ ಚೆಸ್ ಫೆಸ್ಟಿವಲ್‌ನಲ್ಲಿ ಆನಂದ್ ಮೂರನೇ ಮತ್ತು ಅಂತಿಮ GM ನಾರ್ಮ್ ಗಳಿಸಿದ್ದರು.

ಚೆಸ್ ಬಗ್ಗೆ ಪ್ರಣವ್ ಆನಂದ್ ಸಾಕಷ್ಟು ಒಲವು ಹೊಂದಿದ್ದಾರೆ. ಆಟದ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಉತ್ಸಾಹವುಳ್ಳವರು. ಅವರು ವಿಶೇಷವಾಗಿ ಲೆಕ್ಕಾಚಾರ ಮತ್ತು ಅಂತಿಮ ಆಟಗಳಲ್ಲಿ ಉತ್ತಮರಾಗಿದ್ದಾರೆ; ಇದೇ ಅವರ ಸಾಮರ್ಥ್ಯ ಎಂದು ಎಂದು ಆನಂದ್ ಅವರ ಕೋಚ್ ವಿ ಸರವಣನ್ ಹೇಳಿದ್ದಾರೆ.

ಅಂತಿಮ ಸುತ್ತಿನಲ್ಲಿ ಸ್ಪೇನ್‌ನ ಐದನೇ ಶ್ರೇಯಾಂಕದ ಜಿಎಂ ಎಡ್ವರ್ಡೊ ಇಟುರಿಜಾಗ ಬೊನೆಲ್ಲಿ (2,619) ವಿರುದ್ಧ ತಮ್ಮ ಆಟವನ್ನು ಡ್ರಾ ಮಾಡುವ ಮೂಲಕ ಆನಂದ್ ಬೈಲ್‌ನಲ್ಲಿ ತಮ್ಮ ಮೂರನೇ ಮತ್ತು ಅಂತಿಮ GM ಪಡೆದುಕೊಂಡರು. 

SCROLL FOR NEXT