ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಹಾಕಿ ಏಷ್ಯನ್ ಚಾಂಪಿಯನ್ಸ್: ಜಪಾನ್ ಗೆ ಮೂರನೇ ಸ್ಥಾನ

ಇಲ್ಲಿನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾ ತಂಡವನ್ನು 5-3 ಗೋಲುಗಳಿಂದ ಸೋಲಿಸಿದ ಜಪಾನ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.

ಜಪಾನ್ ತಂಡದ ಆಟಗಾರರ ಸಂಭ್ರಮ
Nagaraja AB
Updated On : 14 Aug 2023, 2:40 pm

ಚೆನ್ನೈ: ಇಲ್ಲಿನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾ ತಂಡವನ್ನು 5-3 ಗೋಲುಗಳಿಂದ ಸೋಲಿಸಿದ ಜಪಾನ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯವನ್ನು ಭಾರತ ಎದುರು ಜಪಾನ್ ಸೋತಿತ್ತು.

ಇದನ್ನೂ ಓದಿ: ಹಾಕಿ ಏಷ್ಯನ್ ಚಾಂಪಿಯನ್ಸ್: ಮಲೇಷಿಯಾವನ್ನು 4-3 ಗೋಲುಗಳಿಂದ ಸೋಲಿಸಿ 4ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಭಾರತ

ಜಪಾನ್ ತಂಡದ ಪರ ರೋಮ ಓಕಾ (3ನೇ ನಿಮಿಷ)  ರೊಸೆಯಿ ಕಾಟೊ ( 9ನೇ ನಿಮಿಷ )ಕೆಂಟಾರೂ ಫುಕುದಾ (28 ನೇ ನಿಮಿಷ) ಶೋತ ಯಮಾಡ (53ನೇ ನಿಮಿಷ) ಮತ್ತು ಕೆನ್ ನಗಯೊಶಿ 58ನೇ ನಿಮಿಷ ದಲ್ಲಿ ಗೋಲು ಬಾರಿಸುವ ಮೂಲಕ ಗೆಲುವಿಗೆ ಪ್ರಮುಖ ಕಾರಣರಾದರು. 

Advertisement

Advertisement

2021ರ ಟೂರ್ನಿಯ ಫೈನಲ್ ನಲ್ಲಿ ಜಪಾನ್ ತಂಡ ಕೊರಿಯಾ ಎದುರು ಸೋತು ರನ್ನರ್ ಅಪ್ ಆಗಿತ್ತು. ಅಂದು ಎದುರಾಗಿದ್ದ ಸೋಲಿಗೆ ಈ ಬಾರಿ ಮುಯ್ಯಿ ತೀರಿಸಿಕೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement