ವೈಶಾಲಿ 
ಕ್ರೀಡೆ

ಮಹಿಳಾ ಗ್ರ್ಯಾಂಡ್‌ ಮಾಸ್ಟರ್ ಪ್ರಶಸ್ತಿ ಗೆದ್ದ ವೈಶಾಲಿ, ಚೆಸ್ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿ

ಸ್ಪೇನ್‌ನಲ್ಲಿ ಶುಕ್ರವಾರ ನಡೆದ IV ಎಲ್ ಲೊಬ್ರೆಗಟ್ ಓಪನ್‌ನಲ್ಲಿ ಭಾರತದ ಚೆಸ್ ಆಟಗಾರ್ತಿ ವೈಶಾಲಿ ರಮೇಶ್ ಬಾಬು ಅವರು 2500 ಎಫ್ಐಡಿಇ ರ್ಯಾಂಕಿಂಗ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ...

ನವದೆಹಲಿ: ಸ್ಪೇನ್‌ನಲ್ಲಿ ಶುಕ್ರವಾರ ನಡೆದ IV ಎಲ್ ಲೊಬ್ರೆಗಟ್ ಓಪನ್‌ನಲ್ಲಿ ಭಾರತದ ಚೆಸ್ ಆಟಗಾರ್ತಿ ವೈಶಾಲಿ ರಮೇಶ್ ಬಾಬು ಅವರು 2500 ಎಫ್ಐಡಿಇ ರ್ಯಾಂಕಿಂಗ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಮೂಡಿಗೇರಿಸಿಕೊಂಡಿದ್ದಾರೆ.

ಈ ಮೂಲಕ ಕೋನೇರು ಹಂಪಿ ಮತ್ತು ಹರಿಕಾ ದ್ರೋಣವಲ್ಲಿ ಅವರ ನಂತರ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದ ಭಾರತದ ಮೂರನೇ ಮಹಿಳಾ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಲೆಜೆಂಡರಿ ವಿಶ್ವನಾಥನ್ ಆನಂದ್, ಹಂಪಿ, ದ್ರೋಣವಲ್ಲಿ, ದಿಬ್ಯೇಂದು ಬರುವಾ, ಪ್ರಗ್ನಾನಂದ ರಮೇಶ್‌ಬಾಬು ಸೇರಿದಂತೆ ಈ ಪ್ರಶಸ್ತಿಯನ್ನು ಪಡೆದ 80ಕ್ಕೂ ಹೆಚ್ಚು ಭಾರತೀಯ ಚೆಸ್ ಆಟಗಾರರ ಪಟ್ಟಿಗೆ ಈಗ ವೈಶಾಲಿ ಸೇರಿದ್ದಾರೆ. 

ವೈಶಾಲಿ ಅವರು 18 ವರ್ಷದ ಯುವ ಚೆಸ್ ಆಟಗಾರ ಪ್ರಗ್ನಾನಂದ ಅವರ ಸಹೋದರಿಯಾಗಿದ್ದು, ಚೆಸ್ ಆಟದ ಇತಿಹಾಸದಲ್ಲಿ ಮೊದಲ ಬಾರಿ ಗ್ರಾಂಡ್ ಮಾಸ್ಟರ್ ಪ್ರಶಸ್ತಿ ಪಡೆದ ಒಡಹುಟ್ಟಿದವರಾಗಿದ್ದಾರೆ.

ಇವರಿಬ್ಬರ ಸಾಧನೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT