ಕ್ರೀಡೆ

8 ವರ್ಷಗಳ ಬಳಿಕ ರಾಷ್ಟ್ರೀಯ ಮಟ್ಟದ ಹಿರಿಯರ ವಿಭಾಗದಲ್ಲಿ ಜಿಮ್ನಾಸ್ಟಿಕ್‌ ಪಟು ದೀಪಾ ಕರ್ಮಕಾರ್ ಸ್ಪರ್ಧೆ

Srinivas Rao BV

ನವದೆಹಲಿ: ಜಿಮ್ನಾಸ್ಟಿಕ್‌ ಪಟು ದೀಪಾ ಕರ್ಮಕಾರ್ 8 ವರ್ಷಗಳ ಬಳಿಕ ಕ್ರೀಡಾ ಸ್ಪರ್ಧೆಯೊಂದರಲ್ಲಿ ಭಾಗವಹಿಸುತ್ತಿದ್ದಾರೆ. ಭುವನೇಶ್ವರದಲ್ಲಿ ನಡೆಯಲಿರುವ ಹಿರಿಯ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ನಲ್ಲಿ ದೀಪಾ ಭಾಗಿಯಾಗಲಿದ್ದಾರೆ.

ಜನವರಿ 2ರಿಂದ 4ರವರೆಗೆ ಇಲ್ಲಿ ಪ್ರತಿಷ್ಠಿತ ಕಾರ್ಯಕ್ರಮ ನಡೆಯಲಿದೆ. ದೀಪಾ ಅಲ್ಲದೆ, ಚಾಂಪಿಯನ್‌ಶಿಪ್‌ನಲ್ಲಿ ಟೋಕಿಯೊ ಒಲಿಂಪಿಯನ್ ಪ್ರಣತಿ ನಾಯಕ್, ಯೋಗೇಶ್ವರ್ ಸಿಂಗ್, ರಾಕೇಶ್ ಪಾತ್ರ, ತಪನ್ ಮೊಹಂತಿ, ಸೈಫ್ ತಾಂಬೋಲಿ ಮತ್ತು ಗೌರವ್ ಕುಮಾರ್ ಮುಂತಾದವರು ಸಹ ಭಾಗವಹಿಸಲಿದ್ದಾರೆ.

"ದೀಪಾ ಸೀನಿಯರ್ ನ್ಯಾಷನಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಕಳೆದ ಬಾರಿಗೆ ದೇಶೀಯ ಸಮಾರಂಭದಲ್ಲಿ ಭಾಗವಹಿಸಿದ್ದು 2015 ರಲ್ಲಿ. ಇದು ಅವರ ಕೊನೆಯ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಾಗಿದೆ" ಎಂದು ಅವರ ಕೋಚ್ ಬಿಸ್ವೆಶ್ವರ್ ನಂದಿ ಪಿಟಿಐಗೆ ಹೇಳಿಕೆ ನೀಡಿದ್ದಾರೆ.

ಅಗರ್ತಲಾ ಮೂಲದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಮಹಿಳಾ ಜಿಮ್ನಾಸ್ಟ್ ಆಗಿರುವ ದೀಪಾ, SAI ನ ಆಯ್ಕೆ ಮಾನದಂಡವನ್ನು ಪೂರೈಸದ ಕಾರಣ ಟ್ರಯಲ್ಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೂ ಏಷ್ಯನ್ ಗೇಮ್ಸ್‌ಗೆ ನಿರ್ಲಕ್ಷಿಸಲ್ಪಟ್ಟರು.

ಡೋಪಿಂಗ್ ಉಲ್ಲಂಘನೆಯಿಂದಾಗಿ 21 ತಿಂಗಳ ಅಮಾನತುಗೊಂಡ ನಂತರ ಆಕೆ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

ಆದಾಗ್ಯೂ, ನಂದಿ ತಮ್ಮ ಶಿಷ್ಯೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಸಾಧ್ಯತೆಯ ಬಗ್ಗೆ ಭರವಸೆಯನ್ನು ಬಿಟ್ಟುಕೊಟ್ಟಿಲ್ಲ. ಈ ನಡುವೆ ದೀಪಾ ಅವರಿಗೆ ದೀಪಾ ಮೊಣಕಾಲು ಸಮಸ್ಯೆ ಕಾಣಿಸಿಕೊಂಡಿತ್ತು. ಈಗ ಸ್ವಲ್ಪ ಸಮಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ಜಿಮ್ನಾಸ್ಟಿಕ್ ಫೆಡರೇಶನ್ ಆಫ್ ಇಂಡಿಯಾದಿಂದ 28 ಅಂಗಸಂಸ್ಥೆಗಳು ಭಾಗವಹಿಸುವ ಚಾಂಪಿಯನ್‌ಶಿಪ್‌ ನಲ್ಲಿ ದೇಶಾದ್ಯಂತದ 550 ಆಟಗಾರರು, 120 ಸಹಾಯಕ ಸಿಬ್ಬಂದಿ ಮತ್ತು 100 ಅಧಿಕಾರಿಗಳು ಸೇರಿದಂತೆ ಒಟ್ಟು 750 ಭಾಗವಹಿಸುವ ನಿರೀಕ್ಷೆ ಇದೆ.

SCROLL FOR NEXT