ದೀಪಾ ಕರ್ಮಕರ್ 
ಕ್ರೀಡೆ

ದೇಶದ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಯಾವತ್ತಿಗೂ ಮಾಡುವುದಿಲ್ಲ: ದೀಪಾ ಕರ್ಮಕರ್

ಸ್ಪರ್ಧೆಯಿಂದ 21 ತಿಂಗಳ ನಿಷೇಧ ಎಂಬ ಸುದ್ದಿ ಹೊರಬರುತ್ತಿದ್ದಂತೆ ಪ್ರತಿಕ್ರಿಯಿಸಿರುವ ಭಾರತೀಯ ಮಹಿಳಾ ಜಿಮ್ನಾಸ್ಟ್ ದೀಪಾ ಕರ್ಮಕರ್, ದೇಶದ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

ನವದೆಹಲಿ: ಸ್ಪರ್ಧೆಯಿಂದ 21 ತಿಂಗಳ ನಿಷೇಧ ಎಂಬ ಸುದ್ದಿ ಹೊರಬರುತ್ತಿದ್ದಂತೆ ಪ್ರತಿಕ್ರಿಯಿಸಿರುವ ಭಾರತೀಯ ಮಹಿಳಾ ಜಿಮ್ನಾಸ್ಟ್ ದೀಪಾ ಕರ್ಮಕರ್, ದೇಶದ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

ದೀಪಾ ಕರ್ಮಕರ್ ಅವರಿಗೆ ಹೇರಲಾಗಿರುವ ನಿಷೇಧ ಜುಲೈ 10ಕ್ಕೆ ಮುಕ್ತಾಯವಾಗುತ್ತದೆ. ಪರೀಕ್ಷಾ ವರದಿಯಲ್ಲಿ ದೀಪಾ ನಿಷೇಧಿತ ವಸ್ತುವಾದ ಹೈಜೆನಮೈನ್ ಸೇವಿಸಿರುವುದು ಪತ್ತೆಯಾಗಿದೆ.ಪಾಸಿಟಿವ್ ಸ್ಯಾಂಪಲ್ ನ್ನು ಅಕ್ಟೋಬರ್ 11, 2021ರಲ್ಲಿ ಸಂಗ್ರಹಿಸಲಾಗಿತ್ತು. 

ಈ ಕುರಿತು ಸೋಷಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿರುವ ಅವರು, ನನ್ನ ವೃತ್ತಿಜೀವನದಲ್ಲಿ ಅತಿ ದೀರ್ಘಕಾಲ ನಡೆಸಿದ ಹೋರಾಟಕ್ಕೆ ಇಂದು ಅಂತ್ಯ ಸಿಕ್ಕಿದೆ. 2021ರ ಅಕ್ಟೋಬರ್ ನಲ್ಲಿ ಸ್ಪರ್ಧೆಯ ಸಂದರ್ಭದಲ್ಲಿ ನನ್ನ ರಕ್ತದ ಮಾದರಿಯನ್ನು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಲಾಗಿತ್ತು. ಪಾಸಿಟಿವ್ ಎಂದು ಬಂದಿತು. ಅದು ನನ್ನ ಅರಿವಿಗೆ ಬಾರದೇ ನಾನು ಸೇವಿಸಿದ್ದು ಎಲ್ಲಿಂದ ಬಂತು, ಹೇಗೆ ಸೇವಿಸಿದೆ ಎಂದು ಗೊತ್ತಾಗಲಿಲ್ಲ. ಕೂಡಲೇ ನಾನು ಸಾಧ್ಯತಾ ಅಮಾನತು ತೆಗೆದುಕೊಳ್ಳಲು ನಿರ್ಧರಿಸಿ ಅಂತಾರಾಷ್ಟ್ರೀಯ ಫೆಡರೇಷ್ ನಲ್ಲಿ ಹೋರಾಡಲು ಮುಂದಾದೆ ಎಂದರು.

29 ವರ್ಷದ ದೀಪಾ ಕರ್ಮಕರ್ ಅವರ ಶಿಕ್ಷೆಯ ಪ್ರಮಾಣವನ್ನು ಇದೀಗ 3 ತಿಂಗಳು ಕಡಿತಗೊಳಿಸಲಾಗಿದೆ. ಸೌಹಾರ್ದಯುತವಾಗಿ ಕೇಸು ಬಗೆಹರಿದಿದೆ. ಜುಲೈಯಲ್ಲಿ ನಾನು ಆಟಕ್ಕೆ ಮರಳಬಹುದು ಎಂದರು. 

ಮಾಧ್ಯಮಗಳಲ್ಲಿ ತಪ್ಪು ವರದಿ: ನನ್ನನ್ನು ಎರಡು ವರ್ಷಗಳ ಕಾಲ ಅಮಾನತು ಮಾಡಲಾಗಿದೆ ಎಂದು ಹಲವು ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಸತ್ಯಕ್ಕೆ ದೂರವಾಗಿದೆ. ನನ್ನ ವೃತ್ತಿಬದುಕಿನಲ್ಲಿ ನಿಷೇಧಿತ ಉದ್ದೀಪನ ಮದ್ದು ಸೇವಿಸುವ ಯೋಚನೆಯೇ ನನಗೆ ಬಂದಿಲ್ಲ. ನನ್ನ ತಲೆಯಲ್ಲಿ ಜಿಮ್ನಾಸ್ಟ್ ಇದ್ದು ದೇಶದ ಗೌರವಕ್ಕೆ ಚ್ಯುತಿ ಬರುವಂತೆ ನಾನು ನಡೆದುಕೊಳ್ಳುವುದಿಲ್ಲ, ಸದ್ಯದಲ್ಲಿಯೇ ಮೊದಲಿನಂತೆ ಆಟಕ್ಕೆ ಮರಳಲು ನೋಡುತ್ತೇನೆ ಎಂದರು.

2016ರ ರಿಯೊ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಬೆಳ್ಳಿ ಪದಕ ತಂದು ದೀಪಾ ಕರ್ಮಕರ್ ಹೆಸರು ಮಾಡಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT