ಚಹಾ ಮಾರಾಟ ಮಾಡುತ್ತಿರುವ ಆರ್ಚರ್ ದೀಪ್ತಿ ಕುಮಾರಿ 
ಕ್ರೀಡೆ

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶೃತಿ: ಆರ್ಚರ್ ದೀಪ್ತಿ ಕುಮಾರಿಗೆ ಹರಿದುಬಂದ ನೆರವು

ಆರ್ಚರ್ ದೀಪ್ತಿ ಕುಮಾರಿ ಅವರು ರಾಂಚಿಯಲ್ಲಿ ಚಹಾದ ಅಂಗಡಿ ನಡೆಸುತ್ತಿರುವ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲ ನೀಡಿದ್ದು, ಆಟಗಾರ್ತಿಯ ದಯನೀಯ ಪರಿಸ್ಥಿತಿಗೆ ಮರುಗಿರುವ ಓದುಗರು ನೆರವಿನ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ರಾಂಚಿ: ಆರ್ಚರ್ ದೀಪ್ತಿ ಕುಮಾರಿ ಅವರು ರಾಂಚಿಯಲ್ಲಿ ಚಹಾದ ಅಂಗಡಿ ನಡೆಸುತ್ತಿರುವ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲ ನೀಡಿದ್ದು, ಆಟಗಾರ್ತಿಯ ದಯನೀಯ ಪರಿಸ್ಥಿತಿಗೆ ಮರುಗಿರುವ ಓದುಗರು ನೆರವಿನ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಹೌದು..ಆರ್ಚರ್ ದೀಪ್ತಿ ಕುಮಾರಿ ರಾಂಚಿಯಲ್ಲಿ ಟೀ ಸ್ಟಾಲ್ ನಡೆಸುತ್ತಿರುವ ಕುರಿತು TNIE ವರದಿ ಪ್ರಕಟಿಸಿದ ನಂತರ ಆಟಗಾರ್ತಿಯ ತರಬೇತಿಗೆ ಹೊಸ ಉಪಕರಣಗಳನ್ನು ಖರೀದಿಸಲು ಸಹಾಯ ಮಾಡಲು ಓದುಗರು ಆರ್ಥಿಕ ನೆರವು ನೀಡುತ್ತಿದ್ದಾರೆ. ವರದಿಯಿಂದ ಪ್ರೇರೇಪಿತರಾಗಿರುವ ಕೇರಳದ ಉದ್ಯಮಿ ಮುಖೇಶ್ ಜೈನ್ ದೀಪ್ತಿಗೆ 11 ಸಾವಿರ ರೂ ನೀಡಿದ್ದು, ಈ ಕುರಿತು ಮಾತನಾಡಿರುವ ಅವರು 'ಕ್ರೀಡೆಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಹುಡುಗಿಗೆ ಬಿಲ್ಲು ಕೂಡ ಇಲ್ಲ ಎಂದು ಓದಿದ ನಂತರ ನಾನು ಆಘಾತಕ್ಕೊಳಗಾಗಿದ್ದೇನೆ" ಎಂದು ಜೈನ್ ಹೇಳಿದರು.

ಅಂತೆಯೇ ದೀಪ್ತಿ ಕುಮಾರಿ ಅವರಿಗೆ ಕ್ರೀಡಾ ಉಪಕರಣಗಳನ್ನು ಖರೀದಿಸಲು 4.5 ಲಕ್ಷ ರೂಪಾಯಿ ಬೇಕು. ಎಲ್ಲರೂ ಸ್ವಲ್ಪ ಕೊಡುಗೆ ನೀಡಿದರೆ, ಹೊಸ ಸೆಟ್ ಖರೀದಿಸಲು ಅವರಿಗೆ ನೆರವಾಗುತ್ತದೆ. ನಾನು ನನ್ನ ಕೈಲಾದಷ್ಟು ಮಾಡಿದ್ದೇನೆ ಮತ್ತು ಇತರರಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ದೇಣಿಗೆ ನೀಡುವಂತೆ ನಾನು ಮನವಿ ಮಾಡುತ್ತೇನೆ ಎಂದು ಜೈನ್ ಹೇಳಿದರು, ಅಲ್ಲದೆ ಆಟಗಾರರ ಕುರಿತು ನಿರಾಸಕ್ತಿ ತೋರಿರುವ ಸರ್ಕಾರದ ನಡೆಯನ್ನು ಅವರು ಖಂಡಿಸಿದರು.

ಇತ್ತ ಚೆನ್ನೈನ ಮತ್ತೊಬ್ಬ ಓದುಗರಾದ ಸುಶ್ರೀ ಶಂಕರ್ ಕೂಡ ದೀಪ್ತಿ ಅವರಿಗೆ ಸಹಾಯ ಮಾಡಲು ಮುಂದಾಗಿದ್ದು, "ನನ್ನ ಮಗಳು ಜಿಮ್ನಾಸ್ಟ್ ಆಗಿದ್ದಾಳೆ ಮತ್ತು ಒಬ್ಬ ಕ್ರೀಡಾಪಟು ಸಹಿಸಿಕೊಳ್ಳುವ ಹೋರಾಟ ನನಗೆ ತಿಳಿದಿದೆ" ಎಂದು ಅವರು ಹೇಳಿದರು.

ಇನ್ನು ತಮಗೆ ನೆರವು ನೀಡುತ್ತಿರುವವರಿಗೆ ಧನ್ಯವಾದ ಅರ್ಪಿಸಿರುವ ರಾಷ್ಟ್ರೀಯ ಮಟ್ಟದ ಆಟಗಾರ್ತಿ ದೀಪ್ತಿ ಕುಮಾರಿ, 'ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ನನ್ನ ಬಳಿ ಪದಗಳಿಲ್ಲ ಎಂದು ಹೇಳಿದ್ದಾರೆ.

100ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವ ದೀಪ್ತಿ, ಆರ್ಚರಿ ಕಿಟ್ ಖರೀದಿಸಲು ತಾಯಿ ಮಾಡಿದ ಸಾಲವನ್ನು ತೀರಿಸಲು ಈಗ ಚಹಾ ಮಾರಾಟ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT