ಕ್ರೀಡೆ

ನಿಷೇಧಿತ ಡ್ರಗ್ ಸೇವೆನೆ ಆರೋಪದ ಮೇಲೆ ದ್ಯುತಿ ಚಾಂದ್ ತಾತ್ಕಾಲಿಕ ಅಮಾನತು

Lingaraj Badiger

ಚೆನ್ನೈ: ನಿಷೇಧಿತ ಡ್ರಗ್ ಸೇವೆನೆ ಆರೋಪದ ಮೇಲೆ ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಾಂದ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.

ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆ ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ದ್ಯುತಿ ಚಾಂದ್ ಅವರಿಗೆ ಪಾಸಿಟಿವ್ ದೃಢಪಟ್ಟಿದೆ. ದ್ಯುತಿ ಚಾಂದ್‌ ಅವರನ್ನು ಪರಿಕ್ಷೇಗೆ ಒಳಪಡಿಸಿದಾಗ ಕ್ರೀಡೆಗಳಲ್ಲಿ ಕಾರ್ಯಕ್ಷಮತೆಯ ವರ್ಧನೆಗಾಗಿ ಬಳಸುವ ನಿಷೇಧಿತ ಪದಾರ್ಥಗಳಾದ ಅನಾಬೊಲಿಕ್ ಸ್ಟೆರಾಯ್ಡ್‌ ಬಳಸಿದ್ದಾರೆ. ಜೊತೆಗೆ ಸ್ನಾಯು ಮತ್ತು ಮೂಳೆಗಳ ಬೆಳವಣಿಗೆಗೆ ಸಹಾಯಕವಾಗುವ ಆಂಡ್ರೊಜೆನ್ ಬಳಕೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ.

ನಿಷೇಧಿತ ಡ್ರಗ್ ಸೇವೆನೆ ಆರೋಪದ ಮೇಲೆ ತಾವು ಅಮಾನತುಗೊಂಡಿರುವ ವರದಿಯನ್ನು ತಳ್ಳಿಹಾಕಿದ 100 ಮೀ ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ದ್ಯುತಿ ಚಾಂದ್ ಅವರು, ಆ ಬಗ್ಗೆ ಇದುವರೆಗೆ ಯಾರಿಂದಲೂ ಅಂತಹ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ.

"ನನಗೆ ಕೆಲವು ಸಾಮಾಜಿಕ ಮಾಧ್ಯಮದ ಸ್ಕ್ರೀನ್‌ಶಾಟ್‌ಗಳು ಬರುತ್ತಿವೆ. ಆದರೆ ಅಧಿಕೃತವಾಗಿ ಇಲ್ಲಿಯವರೆಗೆ ನಾನು NADA ಅಥವಾ WADAದಿಂದ ಅಂತಹ ಯಾವುದೇ ಮಾಹಿತಿ ಬಂದಿಲ್ಲ" ಎಂದು ಅವರು ಬುಧವಾರ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

"ನಾನು ಇಲ್ಲಿಯವರೆಗೆ ಯಾವುದೇ ಡೋಪಿಂಗ್ ಅಪರಾಧವನ್ನು ಹೊಂದಿಲ್ಲ. ಅದರ ಮೇಲೆ ಡಿಸೆಂಬರ್‌ನಲ್ಲಿ ಯಾವುದೇ ಸ್ಪರ್ಧೆ ಸಹ ಇರಲಿಲ್ಲ. ಈ ಬಗ್ಗೆ ಡಾಕ್ಯುಮೆಂಟ್ ಅಗತ್ಯವಿದ್ದು, ಸರಿಯಾಗಿ ಪರಿಶೀಲಿಸಬೇಕು" ಎಂದು ಏಷ್ಯನ್ ಗೇಮ್ಸ್ ಪದಕ ವಿಜೇತೆ ದ್ಯುತಿ ಚಾಂದ್ ಅವರು ಹೇಳಿದ್ದಾರೆ.

ದ್ಯುತಿ ಚಾಂದ್ ಅವರು ಕ್ರೀಡೆಯಿಂದ ಅಮಾನತುಗೊಂಡಿರುವುದರಿಂದ ಏಷ್ಯನ್ ಗೇಮ್ಸ್‌ನಲ್ಲಿ ಅವರು ಭಾಗವಹಿಸುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.

SCROLL FOR NEXT