ಕ್ರೀಡೆ

2023 ಏಷ್ಯನ್ ಪ್ಯಾರಾ ಗೇಮ್ಸ್ ಗೆ ಚಾಲನೆ: ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಶುಭಾಶಯ

Nagaraja AB

ಹ್ಯಾಂಗ್‌ಝೌ: ಏಷ್ಯನ್​ ಗೇಮ್ಸ್​ 19ನೇ ಆವೃತ್ತಿಯಲ್ಲಿ ಒಟ್ಟು 107 ಪದಕಗಳನ್ನು ಗೆದ್ದು ಹೊಸ ಇತಿಹಾಸ ಬರೆದಿರುವ ಭಾರತ ಈಗ ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲೂ ಪದಕಗಳ ಭೇಟಿಯಾಡುವ ಉತ್ಸಾಹದಲ್ಲಿದೆ. ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂನಲ್ಲಿ ಭಾನುವಾರ ವರ್ಣರಂಜಿತ ಸಮಾರಂಭದೊಂದಿಗೆ 7 ದಿನಗಳ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು. 

196 ಪುರುಷ, 113 ಮಹಿಳೆಯರ ಸಹಿತ 309 ದಿವ್ಯಾಂಗ ಕ್ರೀಡಾಪಟುಗಳ ಬೃಹತ್​ ತಂಡದೊಂದಿಗೆ ಭಾರತ ಕಣಕ್ಕಿಳಿಯಲಿದ್ದು, ಕರ್ನಾಟಕದ 14 ಕ್ರೀಡಾಪಟುಗಳೂ ಕಣದಲ್ಲಿದ್ದಾರೆ. 2021ರ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ದಾಖಲೆಯ 19 ಪದಕ ಗೆದ್ದಿದ್ದ ಭಾರತ ತಂಡದ 54 ಕ್ರೀಡಾಪಟುಗಳ ಪೈಕಿ 51 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. 

 ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ.ಈ ಸಂಬಂಧ ಟ್ವೀಟ್ (ಎಕ್ಸ್) ಮಾಡಿರುವ ಅವರು, ಭಾರತೀಯ ತಂಡಕ್ಕೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಭಾರತವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕ್ರೀಡಾಪಟುವಿಗೂ ಸ್ಪೂರ್ತಿದಾಯಕ ಜೀವನ ಪಯಣವಿದೆ. ಅವರು ಭಾರತೀಯ ಕ್ರೀಡಾಸ್ಫೂರ್ತಿಯ ನಿಜವಾದ ಸಾರವನ್ನು ತೋರಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.

SCROLL FOR NEXT