ಏಷ್ಯನ್ ಗೇಮ್ಸ್ ನಲ್ಲಿ ಭಾರತದ ತಂಡ. 
ಕ್ರೀಡೆ

ಏಷ್ಯನ್ ಗೇಮ್ಸ್ 2023: ​ದೇಶಕ್ಕೆ ಮತ್ತೊಂದು ಚಿನ್ನ, ಶೂಟಿಂಗ್‌ನಲ್ಲಿ ಬಂಗಾರ ಗೆದ್ದ ಭಾರತದ ತಂಡ

ಏಷ್ಯನ್ ಗೇಮ್ಸ್‌ನಲ್ಲಿ ಗುರುವಾರವೂ ಭಾರತಕ್ಕೆ ಅದ್ಭುತ ಆರಂಭ ದೊರೆತಿದೆ. ಶೂಟಿಂಗ್ ವಿಭಾಗದಲ್ಲಿ ಭಾರತ ಮತ್ತೊಂದು ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್‌ನಲ್ಲಿ ಗುರುವಾರವೂ ಭಾರತಕ್ಕೆ ಅದ್ಭುತ ಆರಂಭ ದೊರೆತಿದೆ. ಶೂಟಿಂಗ್ ವಿಭಾಗದಲ್ಲಿ ಭಾರತ ಮತ್ತೊಂದು ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.

10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. ಸರಬ್ಜೋತ್ ಸಿಂಗ್, ಶಿವ ನರ್ವಾಲ್ ಮತ್ತು ಅರ್ಜುನ್ ಸಿಂಗ್ ಚೀಮಾ ಅವರನ್ನು ಒಳಗೊಂಡ ಪುರುಷರ 10 ಮೀಟರ್ ಏರ್ ಪಿಸ್ತೂಲ್ ತಂಡದಲ್ಲಿ ಒಟ್ಟು 1734 ಸ್ಕೋರ್ ಗಳಿಸುವ ಮೂಲಕ ಚಿನ್ನ ಗೆದ್ದಿದ್ದಾರೆ. ಕೇವಲ ಒಂದು ಅಂಕದ ಅಂತರದಲ್ಲಿ ಚೀನಾವನ್ನು ಸೋಲಿಸುವ ಮೂಲಕ ಭಾರತ ಚಿನ್ನದ ಪದಕಕ್ಕೆ ಮುತ್ತಿಕ್ಕುವಂತೆ ಮಾಡಿದೆ.

ಸರಬ್ಜೋತ್ ಸಿಂಗ್, ಶಿವ ನರ್ವಾಲ್ ಮತ್ತು ಅರ್ಜುನ್ ಸಿಂಗ್ ಚೀಮಾ ಅವರ ಪುರುಷರ 10 ಮೀಟರ್ ಏರ್ ಪಿಸ್ತೂಲ್ ತಂಡದಲ್ಲಿ ಒಟ್ಟು 1734 ಸ್ಕೋರ್ ಗಳಿಸುವ ಮೂಲಕ ಚಿನ್ನ ಗೆದ್ದರು. ಅವರ ಗಮನಾರ್ಹ ಪ್ರದರ್ಶನವು ಕೇವಲ ಒಂದು ಅಂತರದಲ್ಲಿ ಚೀನಾವನ್ನು ಸೋಲಿಸುವ ಮೂಲಕ ತಂಡವನ್ನು ಚಿನ್ನದ ಪದಕಕ್ಕೆ ಗುರಿಯಿಟ್ಟಿತು.

ಇನ್ನು ವಿಯೆಟ್ನಾಂ ಪ್ರಬಲ ಪ್ರದರ್ಶನ ನೀಡಿ ಒಟ್ಟು 1730 ಅಂಕಗಳೊಂದಿಗೆ ಕಂಚಿನ ಪದಕವನ್ನು ಪಡೆದುಕೊಂಡಿತು. 580 ಅಂಕಗಳನ್ನು ಗಳಿಸಿದ ಸರಬ್ಜೋತ್ ಐದನೇ ಸ್ಥಾನವನ್ನು ಪಡೆದುಕೊಂಡರೆ, ಅರ್ಜುನ್ 578 ಅಂಕಗಳೊಂದಿಗೆ ವೈಯಕ್ತಿಕ ಅರ್ಹತಾ ಸ್ಪರ್ಧೆಯಲ್ಲಿ ಎಂಟನೇ ಸ್ಥಾನ ಪಡೆದರು. ಇವರಿಬ್ಬರೂ ಇಂದು ನಡೆಯಲಿರುವ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.

ವುಶು ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದ ರೋಶಿಬಿನಾ ದೇವಿ
ಏಷ್ಯನ್ ಗೇಮ್ಸ್​ನ ಮಹಿಳೆಯರ 60 ಕೆಜಿ ವುಶು ಫೈನಲ್‌ನಲ್ಲಿ ಭಾರತದ ರೋಶಿಬಿನಾ ದೇವಿ ನವೋರೆಮ್ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ಮಹಿಳೆಯರ 60 ಕೆಜಿ ವುಶು ಸಂಡಾ ಫೈನಲ್‌ನಲ್ಲಿ ಭಾರತದ ನವೋರೆಮ್ ರೋಶಿಬಿನಾ ದೇವಿ ಅವರು ಚೀನಾದ ಹೆವಿವೇಟ್ ವು ಕ್ಸಿಯಾವೊಯ್ ವಿರುದ್ಧ 0-2 ಅಂತರದ ಸೋಲಿನ ನಂತರ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಈ ವಿಭಾಗದಲ್ಲಿ ಹಾಲಿ ಚಾಂಪಿಯನ್‌ ಆಗಿರುವ ವು ಕ್ಸಿಯಾವೊಯಿ ವಿರುದ್ಧ ಭಾರತೀಯ ಆಟಗಾರ್ತಿ ಕಠಿಣ ಹೋರಾಟ ನಡೆಸಿದರು. ಚೀನಾದ ಆಟಗಾರ್ತಿಗೆ ಬಲವಾದ ಆರಂಭವನ್ನು ಪಡೆಯಲು ಅವಕಾಶ ಮಾಡಿಕೊಟ್ಟರು. ಎರಡು ಸುತ್ತುಗಳ ನಂತರ ತೀರ್ಪುಗಾರರು ವು ಕ್ಸಿಯಾವೊಯಿ ಅವರನ್ನು ವಿಜೇತರೆಂದು ಘೋಷಿಸಿದರು. ತನ್ನ ಎದುರಾಳಿಯನ್ನು ಮಣಿಸಲು ಪ್ರಯತ್ನಿಸಿದರು.

ಮೊದಲ ಸುತ್ತು ಆಕ್ರಮಣಕಾರಿ ಆಗಿತ್ತು. ರೋಶಿಬಿನಾ ಅವರನ್ನು ವು ಕ್ಸಿಯಾವೊಯಿ ತಡೆಯಲು ಪ್ರಾರಂಭಿಸಿದರು. ಆದರೂ ಮಣಿಪುರಿ ಅಥ್ಲೀಟ್ ಪುಟಿದೇಳಲು ಪ್ರಯತ್ನಿಸಿದರು. ಆದರೆ, ಮೊದಲ ಸುತ್ತಿನಲ್ಲಿ ವು ಕ್ಸಿಯಾವೊಯಿ 1-0 ಮುನ್ನಡೆ ಸಾಧಿಸಿದರು.

ವು ಎರಡನೇ ಸುತ್ತಿನಲ್ಲಿ ರೋಶಿಬಿನಾ ದೇವಿಯ ಮೇಲೆ ಪ್ರಬಲವಾದ ದಾಳಿ ಮಾಡುವ ಮೂಲಕ ಚಿನ್ನ ಗಳಿಸಿದರು. ಜಕಾರ್ತದಲ್ಲಿ ನಡೆದ 2018ರ ಆವೃತ್ತಿಯಲ್ಲಿ ರೋಶಿಬಿನಾ ಕಂಚು ಗೆದ್ದಿದ್ದರು. ಇದೀಗ ಬೆಳ್ಳಿಗೆ ಮುತ್ತಿಕ್ಕಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT