ಸ್ವಪ್ನಿಲ್ ಕುಸಾಲೆ 
ಕ್ರೀಡೆ

Paris Olympics 2024: ಶೂಟಿಂಗ್ ನಲ್ಲಿ ಸ್ವಪ್ನಿಲ್ ಕುಸಾಲೆಗೆ ಕಂಚು, ಭಾರತಕ್ಕೆ 3ನೇ ಪದಕ

ಪ್ಯಾರಿಸ್ ಒಲಿಂಪಿಕ್ಸ್​ನ ಪುರುಷರ 50 ಮೀ ರೈಫಲ್ 3 ಸುತ್ತಿನಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದಿದ್ದಾರೆ. 8 ಮಂದಿ ಒಳಗೊಂಡಿದ್ದ ಫೈನಲ್ ಸುತ್ತಿನಲ್ಲಿ ಒಟ್ಟು 451.4 ಅಂಕಗಳನ್ನು ಕಲೆಹಾಕುವ ಮೂಲಕ ಭಾರತೀಯ ಶೂಟರ್ ಮೂರನೇ ಸ್ಥಾನ ಪಡೆದಿದ್ದಾರೆ.

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ​2024ರಲ್ಲಿ ಶೂಟರ್ ಸ್ವಪ್ನಿಲ್ ಕುಸಾಲೆ ಒಲಿಂಪಿಕ್ಸ್‌ನಲ್ಲಿ 50 ಮೀಟರ್ ರೈಫಲ್ 3ಪಿ ಈವೆಂಟ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಶೂಟರ್ ಎಂಬ ಇತಿಹಾಸ ಬರೆದಿದ್ದಾರೆ. ಕುಸಾಲೆ 451.4 ಅಂಕ ಗಳಿಸಿ ಚೀನಾದ ಯುಕುನ್ ಲಿಯು (ಚಿನ್ನ) ಮತ್ತು ಉಕ್ರೇನ್‌ನ ಸೆರ್ಹಿ ಕುಲಿಶ್ ಅವರನ್ನು ಹಿಂದಿಕ್ಕಿ, ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್​ನ ಪುರುಷರ 50 ಮೀ ರೈಫಲ್ 3 ಸುತ್ತಿನಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದಿದ್ದಾರೆ. 8 ಮಂದಿ ಒಳಗೊಂಡಿದ್ದ ಫೈನಲ್ ಸುತ್ತಿನಲ್ಲಿ ಒಟ್ಟು 451.4 ಅಂಕಗಳನ್ನು ಕಲೆಹಾಕುವ ಮೂಲಕ ಭಾರತೀಯ ಶೂಟರ್ ಮೂರನೇ ಸ್ಥಾನ ಪಡೆದಿದ್ದಾರೆ. 7ನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದ ಸ್ವಪ್ನಿಲ್ ಕುಸಾಲೆ ಅಂತಿಮ ಸುತ್ತಿನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದರು.

ಅಲ್ಲದೆ ಜೆಕ್ ರಿಪಬ್ಲಿಕ್ ನ ಶೂಟರ್​ ಜಿರಿ ಪ್ರೀವ್ರಾಟ್ಸ್ಕಿ (440.7 ಅಂಕಗಳು) ಅವರನ್ನು ಹಿಂದಿಕ್ಕಿ ಸ್ವಪ್ನಿಲ್ ಕುಸಾಲೆ ಮೂರನೇ ಸ್ಥಾನಕ್ಕೇರಿರು. ಈ ಮೂಲಕ ಒಟ್ಟು 451.4 ಅಂಕಗಳನ್ನು ಕಲೆಹಾಕುವ ಮೂಲಕ ಭಾರತೀಯ ಶೂಟರ್ ಚೊಚ್ಚಲ ಒಲಿಂಪಿಕ್ಸ್ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ