ವಿನೇಶ್ ಫೋಗಟ್  
ಕ್ರೀಡೆ

ರಾತ್ರಿಯಿಡೀ ವರ್ಕೌಟ್ ಮಾಡಿದ್ದ ವಿನೇಶ್ ಫೋಗಟ್; ಕೇವಲ 100 ಗ್ರಾಂ ತೂಕ ಹೆಚ್ಚಳದಿಂದ ಅನರ್ಹ!

ತೂಕ ಏರಿಕೆಯಾದ ಆತಂಕದಲ್ಲಿ ವಿನೇಶ್ ನಿನ್ನೆ ಹಗಲು ರಾತ್ರಿಯಿಡೀ ಸೈಕ್ಲಿಂಗ್, ಸ್ಕಿಪ್ಪಿಂಗ್ ಮಾಡಿ ಹೇಗಾದರೂ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿದ್ದರು.

ಪ್ಯಾರಿಸ್: ವೃತ್ತಿಪರ ಕ್ರೀಡೆಗಳಲ್ಲಿ ಇದು ಸಾಮಾನ್ಯವಾಗಿ ನಡೆಯುವುದಿಲ್ಲ. ಆದರೆ ವಿನೇಶ್ ಫೋಗಟ್ ಪ್ರಕರಣದಲ್ಲಿ ನಡೆದುಹೋಗಿದೆ. ಕೇವಲ 100 ಗ್ರಾಂ ಅಧಿಕ ತೂಕ ಹೊಂದಿದ್ದಾರೆ ಎಂದು ಒಲಿಂಪಿಕ್ಸ್ 2024ರ ಮಹಿಳೆಯರ ಕುಸ್ತಿ ವಿಭಾಗದ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕ ಗಳಿಸುವ ಅವಕಾಶದಿಂದ ಅನರ್ಹಗೊಂಡು ಒಲಿಂಪಿಕ್ಸ್ ನಿಂದಲೇ ಹೊರಬಿದ್ದಿದ್ದಾರೆ. ಒಲಿಂಪಿಕ್ಸ್ ನಿಯಮ ಪ್ರಕಾರ, ಸ್ಪರ್ಧೆಯ ಎರಡೂ ದಿನಗಳಲ್ಲಿ ಅವರು 50 ಕೆಜಿ ತೂಕ ಹೊಂದಿರಬೇಕು.

ಪ್ಯಾರಿಸ್ ನಲ್ಲಿ ಇಂದು ನಡೆದ ಈ ಬೆಳವಣಿಗೆಯನ್ನು ಭಾರತ ತಂಡದ ಕೋಚ್ ವೀರೇಂದ್ರ ಸಿಂಗ್ ದಹಿಯಾ ಖಚಿತಪಡಿಸಿದ್ದಾರೆ. ನಿನ್ನೆ ಮಂಗಳವಾರ ಬೆಳಿಗ್ಗೆ, ಅವರ ತೂಕ ಸರಿಯಾಗಿತ್ತು. ಆದರೆ ಪಂದ್ಯದ ನಂತರ ತೂಕದಲ್ಲಿ ಸ್ವಲ್ಪ ಏರಿಕೆಯಾಯಿತು.

ತೂಕ ಏರಿಕೆಯಾದ ಆತಂಕದಲ್ಲಿ ವಿನೇಶ್ ನಿನ್ನೆ ಹಗಲು ರಾತ್ರಿಯಿಡೀ ಸೈಕ್ಲಿಂಗ್, ಸ್ಕಿಪ್ಪಿಂಗ್ ಮಾಡಿ ಹೇಗಾದರೂ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(IOA) ತನ್ನ ಪ್ರಯತ್ನ ಮುಂದುವರಿಸಿತ್ತು. ಆದರೆ ಈ ದಿನ ವಿನೇಶ್ ಪರವಾಗಿಲ್ಲ. ಚಿನ್ನದ ಪದಕ ಗೆಲ್ಲದಿದ್ದರೂ ಇಂದು ಶತಕೋಟಿ ಜನರ ಮನ ಗೆದ್ದಿದ್ದಾರೆ.

ಭಾರತದ ಒಲಿಂಪಿಕ್ಸ್ ಅಸೋಸಿಯೇಷನ್ ಹೇಳಿಕೆಯಲ್ಲಿ ಏನಿದೆ?: ಮಹಿಳಾ ಕುಸ್ತಿ 50 ಕೆಜಿ ವಿಭಾಗದಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಸುದ್ದಿಯನ್ನು ಇಂದು ಬಹಳ ಬೇಸರ ಮತ್ತು ವಿಷಾದದಿಂದ ಹಂಚಿಕೊಳ್ಳುತ್ತಿದೆ. ರಾತ್ರಿಯಿಡೀ ತಂಡದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರು ಇಂದು ಬೆಳಿಗ್ಗೆ 50 ಕೆಜಿಗಿಂತ ಕೆಲವೇ ಗ್ರಾಂ ಅಧಿಕ ತೂಕವನ್ನು ಹೊಂದಿದ್ದರು.

ಕಳೆದ ರಾತ್ರಿ ಏನು ನಡೆಯಿತು?: ಕಳೆದ ರಾತ್ರಿ ವಿನೇಶ್ ಅವರ ತೂಕ ಪರೀಕ್ಷಿಸಿದಾಗ ಸುಮಾರು 1-1.5 ಕೆಜಿ ಅಧಿಕ ತೂಕ ಹೊಂದಿದ್ದರು. ಇದರಿಂದ ಬಹಳ ಚಿಂತಾಂಕ್ರಾತರಾಗಿ ನಿದ್ರೆ ಮಾಡಲಿಲ್ಲ. ತನ್ನ ತೂಕವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸಿದ್ದರು. ಬೆಳಗ್ಗೆ ಸುಮಾರು 100 ಗ್ರಾಂ ಅಧಿಕ ತೂಕ ಕಂಡುಬಂತು. ಭಾರತ ವಿಭಾಗದ ಅಧಿಕಾರಿಗಳು ಸ್ವಲ್ಪ ಸಮಯ ಕೊಡಿ ಎಂದು ಕೇಳಿಕೊಂಡರು. ಆದರೆ ಸಮಯ ಮೀರಿತ್ತು. ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಕುಸ್ತಿಪಟುವನ್ನು ಪ್ರತಿ ದಿನವೂ ಅವರ ಪಂದ್ಯಗಳ ಮೊದಲು ತೂಕ ಮಾಡಲಾಗುತ್ತದೆ. ಮೊನ್ನೆ ವಿನೇಶ್ 53 ಕೆಜಿ ಇದ್ದು ಆಟವಾಡಿ ಸೆಮಿ ಫೈನಲ್ ಪ್ರವೇಶಿಸಿದ್ದರು. ಆದರೆ ಇದ್ದಕ್ಕಿದ್ದಂತೆ ತೂಕದಲ್ಲಿ ಏರಿಕೆ ಕಂಡುಬಂತು.

ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ನಿಂದ ಈ ಹೊತ್ತಿನಲ್ಲಿ ಇನ್ನಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿನೇಶ್ ಅವರ ಖಾಸಗಿತನವನ್ನು ಗೌರವಿಸುವಂತೆ ಭಾರತ ತಂಡವು ತಂಡವು ಕೇಳಿಕೊಂಡಿದ್ದು, ವಿನೇಶ್ ಅವರು ಮುಂದಿನ ತಮ್ಮ ಪಂದ್ಯಗಳ ಮೇಲೆ ಗಮನ ಹರಿಸುವಂತೆ ವಿನಂತಿ ಮಾಡಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT