ಮೀರಾಬಾಯಿ ಚಾನು (ಸಂಗ್ರಹ ಚಿತ್ರ) online desk
ಕ್ರೀಡೆ

Olympics 2024: ಮೀರಾಬಾಯಿ ಚಾನುಗೆ ದಕ್ಕದ ಪದಕ, 4ನೇ ಸ್ಥಾನ!

ಟೊಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮೀರಾ ಬಾಯಿ ಚಾನು ಈ ಬಾರಿ 4 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಪ್ಯಾರೀಸ್: ಒಲಿಂಪಿಕ್ಸ್ 2024 ರಲ್ಲಿ ಭಾರತದ ವೇಟ್ ಲಿಫ್ಟರ್ ಮೀರಾ ಬಾಯಿ ಚಾನುಗೆ ಪದಕ ಕೈತಪ್ಪಿದೆ.

ಟೊಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮೀರಾ ಬಾಯಿ ಚಾನು ಈ ಬಾರಿ 4 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಸ್ನಾಷ್ ಸ್ಪರ್ಧೆಯ ಮೊದಲ ಯತ್ನದಲ್ಲಿ ಮೀರಾ ಬಾಯಿ 85 ಕೆಜಿಯನ್ನು ಸುಲಭವಾಗಿ ಎತ್ತಿದರು. ಆದರೆ 2 ನೇ ಪ್ರಯತ್ನದಲ್ಲಿ 88 ಕೆ.ಜಿ ತೂಕವನ್ನು ಎತ್ತುವಲ್ಲಿ ವಿಫಲರಾದರು. ಮತ್ತು ಮೂರನೇ ಪ್ರಯತ್ನದಲ್ಲಿ ಕ್ಷಮತೆ ಪ್ರದರ್ಶಿಸಿದ ಚಾನು ಸ್ನಾಷ್ ನಲ್ಲಿ 88 ಕೆ.ಜಿಗಳ ಬೆಸ್ಟ್ ಲಿಫ್ಟ್ ಮೂಲಕ ಕಂಚಿನ ಪದಕದ ಸ್ಥಾನದಲ್ಲಿದ್ದರು.

ಆದರೆ ಕ್ಲೀನ್& ಜರ್ಕ್ ನ ಮೊದಲ ಪ್ರಯತ್ನದಲ್ಲಿ 111 ಕೆಜಿ ಎತ್ತುವಲ್ಲಿ ಮೀರಾಬಾಯಿ ಚಾನು ವಿಫಲರಾದರು. ಎರಡನೇ ಪ್ರಯತ್ನದಲ್ಲಿ ವಿಫಲರಾದ ಮೀರಾಬಾಯಿ ಚಾನು, ಮೂರನೇ ಪ್ರಯತ್ನದಲ್ಲಿ 114 ಕೆ.ಜಿ ಎತ್ತಿದರು. ಅಂತಿಮವಾಗಿ ಕ್ಲೀನ್&ಜರ್ಕ್ ನಲ್ಲಿ 111 ಹಾಗೂ ಸ್ನ್ಯಾಷ್ ನಲ್ಲಿ 88 ಕೆಜಿ ಸೇರಿಸಿ ಒಟ್ಟು 199 ಕೆ.ಜಿ ಲಿಫ್ಟ್ ಮಾಡಿದರು.

ಪರಿಣಾಮ 3ನೇ ಸ್ಥಾನದಲ್ಲಿದ್ದ ಚಾನು 4 ನೇ ಸ್ಥಾನಕ್ಕೆ ಕುಸಿದರು. ಈ ಮೂಲಕ ಮತ್ತೊಂದು ಪದಕ ಲಭ್ಯವಾಗುವ ಭಾರತದ ಕನಸು ಭಗ್ನಗೊಂಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT