ಭಾರತೀಯ ಹಾಕಿ ತಂಡ 
ಕ್ರೀಡೆ

ಕಂಚಿನ ಪದಕದೊಂದಿಗೆ ಸ್ವದೇಶಕ್ಕೆ ಆಗಮಿಸಿದ ಭಾರತೀಯ ಹಾಕಿ ತಂಡ, ಅದ್ದೂರಿ ಸ್ವಾಗತ!

'ದೇಶಕ್ಕಾಗಿ ಗೆದ್ದಿರುವುದು ದೊಡ್ಡ ವಿಷಯವಾಗಿದೆ. ಫೈನಲ್ ಪ್ರವೇಶಿಸಲು ಪ್ರಯತ್ನಿಸಿದೇವು, ಆದರೆ, ನಮ್ಮ ಕನಸು ನನಸು ಆಗಲಿಲ್ಲ. ಆದರೆ ಬರಿಗೈಯಲ್ಲಿ ಹಿಂದಿರುಗಲಿಲ್ಲ'

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿತ ಪದಕ ವಿಜೇತ ಭಾರತೀಯ ಪುರುಷರ ಹಾಕಿ ತಂಡವು ಸ್ವದೇಶಕ್ಕೆ ಆಗಮಿಸಿದೆ. ಹರ್ಮಪ್ರೀತ್ ಸಿಂಗ್ ನೇತೃತ್ವದ ತಂಡ ಶನಿವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಅದ್ದೂರಿ ಸ್ವಾಗತ ನೀಡಲಾಯಿತು.

ಪ್ರತಿಯೊಬ್ಬ ಆಟಗಾರರಿಗೂ ಶಾಲು, ಹೂವಿನ ಹಾರ ಹಾಕುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಆಟಗಾರರು ತಮ್ಮ ಪದಕಗಳನ್ನು ಕ್ಯಾಮರಾಗೆ ತೋರಿಸುವ ಮೂಲಕ ವಿಶಿಷ್ಟವಾಗಿ ಗೆಲುವನ್ನು ಆಚರಿಸಿದರು. ಕೆಲವು ಆಟಗಾರರು ಡ್ರಮ್ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕಿ ನರ್ತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್, ಪದಕ, ಪದಕನೇ, ದೇಶಕ್ಕಾಗಿ ಗೆದ್ದಿರುವುದು ದೊಡ್ಡ ವಿಷಯವಾಗಿದೆ. ಫೈನಲ್ ಪ್ರವೇಶಿಸಲು ಪ್ರಯತ್ನಿಸಿದೇವು, ಆದರೆ, ನಮ್ಮ ಕನಸು ನನಸು ಆಗಲಿಲ್ಲ. ಆದರೆ ಬರಿಗೈಯಲ್ಲಿ ಹಿಂದಿರುಗಲಿಲ್ಲ. ಪದಕ ಗೆದ್ದು ವಾಪಸ್ಸಾಗಿದ್ದು, ಇದಕ್ಕಾಗಿ ಅಪಾರ ಬೆಂಬಲ ನೀಡಿದ ಕೇಂದ್ರ ಸರ್ಕಾರ, SAI ಮತ್ತು ಒಡಿಶಾ ಸರ್ಕಾರಕ್ಕೆ ಧನ್ಯವಾದ ಹೇಳುವುದಾಗಿ ತಿಳಿಸಿದರು.

ಪಿಆರ್ ಶ್ರೀಜೇಶ್ ಅಂತರಾಷ್ಟ್ರೀಯ ಹಾಕಿ ಕ್ರೀಡೆಯಿಂದ ನಿವೃತ್ತಿಯಾಗುತ್ತಿರುವ ಕಾರಣ ಈ ಗೆಲುವನ್ನು "ಭಾವನಾತ್ಮಕ ಕ್ಷಣ" ಎಂದು ಶ್ಲಾಘಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಪ್ರವಾಹದ ರೌದ್ರಾವತಾರ: ಮತ್ತೊಂದು ಜಲಪ್ರಳಯದ ಭೀತಿ; ರಕ್ಷಣಾ ಕಾರ್ಯಾಚರಣೆ ಸ್ಥಗಿತಕ್ಕೆ ಆದೇಶ, ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೈನಿಕರಿಗೆ ಸೂಚನೆ..!

'ಹನೂರು ಎನ್‌ಕೌಂಟರ್'ಗೆ ಬಿಗ್ ಟ್ವಿಸ್ಟ್: ತನಿಖೆಯಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಪ್ಯಾಂಗೋಲಿನ್ ಕಳ್ಳಸಾಗಣೆ ಜಾಲ ಪತ್ತೆ!

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ; ಮೂರೂ ವಿಭಾಗಗಳಲ್ಲಿ ಆಯ್ಕೆಯಾದ ಏಕೈಕ ವ್ಯಕ್ತಿ!

ನೂರಾರು ಪುರುಷರ ಮುಂದೆ ಒಳ ಉಡುಪಿನಲ್ಲಿ ಡ್ಯಾನ್ಸ್: ಶೂಟಿಂಗ್ ವೇಳೆ ಅನುಭವಿಸಿದ ಮುಜುಗರವನ್ನು ಹಂಚಿಕೊಂಡ ಬಾಲಿವುಡ್ ನಟಿ ದಿಯಾ ಮಿರ್ಜಾ!

2019- 2023 ರವರೆಗೆ MUDA ದಲ್ಲಿ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು: ನಿವೇಶನ ಪಡೆದವರಿಗೆ ಯತೀಂದ್ರ ಸಿದ್ದರಾಮಯ್ಯ ಶಾಕ್!