ರೀತಿಕಾ ಹೂಡಾ  
ಕ್ರೀಡೆ

Olympics 2024: ಕುಸ್ತಿಪಟು ರೀತಿಕಾ ಹೂಡಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

ಕೊನೆಯ ದಿನದಂದು ಕುಸ್ತಿಪಟು ರೀತಿಕಾ ಹೂಡಾ ಅವರು ಉತ್ತಮ ಪ್ರದರ್ಶನ ನೀಡಿ, ಹಂಗೇರಿಯ ಬರ್ನಾಡೆಟ್ ನ್ಯಾಗಿ ಅವರ ವಿರುದ್ಧ 12-2 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಸಂತಸದ ಸುದ್ದಿ. ಭಾರತದ ಕುಸ್ತಿಪಟು ರಿತಿಕಾ ಹೂಡಾ ಅವರು ಮಹಿಳೆಯರ 76 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.

ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಮುಕ್ತಾಯದ ಹಂತ ತಲುಪುತ್ತಿದ್ದು, ಕೊನೆಯ ದಿನದಂದು ಕುಸ್ತಿಪಟು ರೀತಿಕಾ ಹೂಡಾ ಅವರು ಉತ್ತಮ ಪ್ರದರ್ಶನ ನೀಡಿ, ಹಂಗೇರಿಯ ಬರ್ನಾಡೆಟ್ ನ್ಯಾಗಿ ಅವರ ವಿರುದ್ಧ 12-2 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.

ರಿತಿಕಾ ಹೂಡಾ ಅವರಿಗೆ ಕ್ವಾರ್ಟರ್ ಫೈನಲ್‌ ನಲ್ಲಿ ಕಠಿಣ ಪೈಪೋಟಿ ಎದುರಾಗಲಿದ್ದು, ಅಗ್ರ ಶ್ರೇಯಾಂಕಿತೆ ಕಿರ್ಗಿಸ್ತಾನದ ಐಪೆರಿ ಮೆಡೆಟ್ ಅವರನ್ನು ಎದುರಿಸಬೇಕಾಗಿದೆ.

ಪುರುಷರ ಕುಸ್ತಿ ವಿಭಾಗದಲ್ಲಿ ಭಾರತದ ಏಕಮಾತ್ರ ಸ್ಪರ್ಧಿಯಾಗಿದ್ದ ಅಮನ್ ಸೆಹ್ರಾವತ್ ಅವರು ಶುಕ್ರವಾರ ಕಂಚಿನ ಪದಕ ಗೆದ್ದಿದ್ದಾರೆ. ಇದು ಈ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಐದನೇ ಕಂಚು ಮತ್ತು ಆರನೇ ಒಟ್ಟಾರೆ ಪದಕವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಕ್ಕಳ ಸಾವಿಗೆ ಪ್ರತೀಕಾರ: ಇಸ್ರೇಲ್-ಅಮೆರಿಕ, ಗಲ್ಫ್ ದೇಶಗಳ ಮೇಲೆ ದಾಳಿ ನಿಲ್ಲಲ್ಲ; ಇರಾನ್ ಹೊಸ ಸರ್ವೋಚ್ಛ ನಾಯಕ ವಾರ್ನಿಂಗ್!

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ನಮ್ಮ ಶಕ್ತಿ ಇರಾನ್ ನಿರ್ನಾಮಕ್ಕೆ ಮೀಸಲು, ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲ್ಲ: ಅಮೆರಿಕ

ಮಾರ್ಚ್ 16 ರಂದು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

SCROLL FOR NEXT