ಚಿನ್ನದ ಪದಕ ಗೆದ್ದ ಆಜ್ಞ ಅಮಿತ್ 
ಕ್ರೀಡೆ

GAMMA ವಿಶ್ವ ಚಾಂಪಿಯನ್ ಶಿಪ್: ಚಿನ್ನದ ಪದಕ ಗೆದ್ದ ಕರ್ನಾಟಕದ ಬಾಲಕಿ ಆಜ್ಞ ಅಮಿತ್!

ಕುಡು ಮಂಗಳೂರಿನ ನಿವಾಸಿಗಳಾದ ಅಮಿತ್ ಮತ್ತು ದಿವ್ಯ ಅವರ ಪುತ್ರಿಯಾಗಿರುವ ಆಜ್ಞ .ಎ, 9 ವರ್ಷದ ಬಾಲಕಿ, 4ನೇ ತರಗತಿಯಲ್ಲಿ ಓದುತ್ತಿದ್ದು, ಕಳೆದ 4 ವರ್ಷಗಳಿಂದ ಕುಶಾಲನಗರದ GMMA ಯಲ್ಲಿ ತಮ್ಮ ತಂದೆ ಹಾಗೂ ಕೋಚ್‌ ಆಗಿರುವ ಅಮಿತ್ ಅವರಿಂದ ತರಬೇತಿ

ಬೆಂಗಳೂರು: ಇಂಡೋನೇಷ್ಯಾ ದ ಜಕಾರ್ತ ದಲ್ಲಿ ಇತ್ತೀಚಿಗೆ ನಡೆದ GAMMA (Global Mixed Martial Arts Association) ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಕರ್ನಾಟಕದ ಪೋರಿ ಆಜ್ಞ ಅಮಿತ್ ಚಿನ್ನದ ಪದಕ ಗೆದ್ದು, ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

10 ವರ್ಷದೊಳಗಿನ 27 ಕೆಜಿ ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ಇಂಡೋನೇಷ್ಯಾದ ಅತ್ಯಂತ ಪ್ರತಿಭಾಶಾಲಿ ಎದುರಾಳಿಯನ್ನು ತಮ್ಮ ಬಲಿಷ್ಠವಾದ ಪ್ರದರ್ಶನದೊಂದಿಗೆ ಸೋಲಿಸುವ ಮೂಲಕ ಸ್ವರ್ಣ ಪದಕ ಗೆದ್ದು ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ.

ಕುಡು ಮಂಗಳೂರಿನ ನಿವಾಸಿಗಳಾದ ಅಮಿತ್ ಮತ್ತು ದಿವ್ಯ ಅವರ ಪುತ್ರಿಯಾಗಿರುವ ಆಜ್ಞ .ಎ, 9 ವರ್ಷದ ಬಾಲಕಿ, 4ನೇ ತರಗತಿಯಲ್ಲಿ ಓದುತ್ತಿದ್ದು, ಕಳೆದ 4 ವರ್ಷಗಳಿಂದ ಕುಶಾಲನಗರದ C3MMA ಯಲ್ಲಿ ತಮ್ಮ ತಂದೆ ಹಾಗೂ ಕೋಚ್‌ ಆಗಿರುವ ಅಮಿತ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

6 ವರ್ಷದ ವಯಸ್ಸಿನಿಂದಲೇ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದ್ದ ಆಜ್ಞ, 2021 ರಲ್ಲಿ ತಮ್ಮ ಮೊದಲ ಬಾಕ್ಸಿಂಗ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಬೆಳ್ಳಿ ಪದಕವನ್ನು ಗಳಿಸಿದ್ದರು. 2022ರಲ್ಲಿ ರಾಜ್ಯ ಮಟ್ಟದ ಕಿಕ್‌ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು.

ಸಂಸದ ಯದುವೀರ್ ಅವರೊಂದಿಗೆ ಆಜ್ಞ, ಅವರ ತಂದೆ ಅಮಿತ್

2023 ರಲ್ಲಿ ದೆಹಲಿಯ ತಲ್ಕಟೋರ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಕಿಕ್‌ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದರು. ಅದರಲ್ಲಿಯೂ ಸಹ ಚಿನ್ನದ ಪದಕವನ್ನು ಗೆದ್ದು ರಾಜ್ಯಕ್ಕೆ ಕೀರ್ತಿತಂದಿದ್ದರು.

2024 ರಲ್ಲಿ, ಅವರು ರಾಷ್ಟ್ರೀಯ ಜಿಯೂಜಿಟ್ಸು ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಪದಕ ಗೆದ್ದಿದ್ದು ಅಲ್ಲದೆ ರಾಷ್ಟ್ರೀಯ ಎಂಎಂಎ ಚಾಂಪಿಯನ್‌ಶಿಪ್‌ನಲ್ಲಿ ಕೂಡ ಭಾಗವಹಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ಈ ಸಾಧನೆಗಳಿಂದ ಅವರು ಇಂಡೋನೇಷ್ಯಾದಲ್ಲಿ ನಡೆಯುವ GAMMA ವಿಶ್ವಚಾಂಪಿಯನಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT