ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿ 
ಕ್ರೀಡೆ

ಭಾರತದ ಖ್ಯಾತ ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿಗೆ 12 ವರ್ಷ ನಿಷೇಧ!

ಉದ್ದೀಪನ ಮದ್ದು ಸೇವನೆ ಆರೋಪಕ್ಕೊಳಗಾಗಿದ್ದ ಭಾರತದ ಖ್ಯಾತ  ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿ ಅವರು ಅಂತಾರಾಷ್ಟ್ರೀಯ ಫೆಡರೇಶನ್‌ನ ಅಥ್ಲೆಟಿಕ್ಸ್ ಇಂಟಗ್ರಿಟಿ ಯೂನಿಟ್ ನ (ಎಐಯು) ಬಹು ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದಕ್ಕಾಗಿ ಮಂಗಳವಾರ 12 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾರೆ.

ನವದೆಹಲಿ: ಉದ್ದೀಪನ ಮದ್ದು ಸೇವನೆ ಆರೋಪಕ್ಕೊಳಗಾಗಿದ್ದ ಭಾರತದ ಖ್ಯಾತ  ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿ ಅವರು ಅಂತಾರಾಷ್ಟ್ರೀಯ ಫೆಡರೇಶನ್‌ನ ಅಥ್ಲೆಟಿಕ್ಸ್ ಇಂಟಗ್ರಿಟಿ ಯೂನಿಟ್ ನ (ಎಐಯು) ಬಹು ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದಕ್ಕಾಗಿ ಮಂಗಳವಾರ 12 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾರೆ. ಪ್ರಮುಖವಾಗಿ ಅವರ ವೃತ್ತಿಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ.

ಏಷ್ಯನ್ ಗೇಮ್ಸ್ ಗೆ ಕೆಲವೇ ದಿನಗಳ ಮೊದಲು ಪರೀಕ್ಷೆಗಾಗಿ  ಕುಮಾರಿ ಅವರಿಂದ ಮಾದರಿಗಳನ್ನು ಅಥ್ಲೆಟಿಕ್ಸ್  ಇಂಟಗ್ರಿಟಿ ಯೂನಿಟ್ ಪಡೆದಿತ್ತು. 30 ವರ್ಷದ ಕ್ರೀಡಾಪಟುವಿನ ಪರೀಕ್ಷಾ ಮಾದರಿಯಲ್ಲಿ ಸ್ಟನೊಝೊಲೋಲ್, ಮೆಟಂಡಯನೋನ್ ಮತ್ತು ಡೀಹೈಡ್ರೋ ಕ್ಲೋರೋಮಿತೈಲ್ಟೆಸ್ಟಾಸ್ಟಿರೋನ್ ಎಂಬ ಸ್ಟೀರಾಯ್ಡ್ ಗಳು ಪತ್ತೆಯಾಗಿದ್ದವು. 

"ನಿಷೇಧಿತ ವಸ್ತುವಿನ ಇರುವಿಕೆ, ಬಳಕೆಗಾಗಿ  ನವೆಂಬರ್ 24,  2023 ರಿಂದ 12 ವರ್ಷಗಳ ಕಾಲ ರಚನಾ ಕುಮಾರಿ ಅವರನ್ನು ನಿಷೇಧಿಸಲಾಗಿದೆ ಎಂದು ಎಐಯು ಟ್ವೀಟ್ ನಲ್ಲಿ ತಿಳಿಸಿದೆ. ಸೆಪ್ಟೆಂಬರ್ 24 ,2023 ರಿಂದ ಯಾವುದೇ ಟೈಟಲ್, ಪ್ರಶಸ್ತಿ, ಪದಕ, ಬಹುಮಾನ ಮತ್ತು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳವುದಾಗಿ ತಿಳಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT