ಕ್ರೀಡೆ

ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಮಣಿಸಿ ನಂಬರ್ 1 ಸ್ಥಾನಕ್ಕೇರಿದ ಭಾರತದ ಪ್ರಗ್ನಾನಂದ

Srinivasamurthy VN

ಬೆಂಗಳೂರು: ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ರನ್ನು ಮಣಿಸುವ ಮೂಲಕ ಭಾರತದ ಉದಯೋನ್ಮುಖ ಚೆಸ್ ತಾರೆ ಆರ್ ಪ್ರಗ್ನಾನಂದ ನಂಬರ್ 1 ಸ್ಥಾನಕ್ಕೇರಿದ್ದಾರೆ.

ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ ನಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಮಣಿಸಿದ ಚೆಸ್ ಪ್ರತಿಭೆ ರಮೇಶ್ ಬಾಬು ಪ್ರಗ್ನಾನಂದ ಅವರು ನಂ.1 ಸ್ಥಾನಕ್ಕೇರಿದ್ದಾರೆ. ಆ ಮೂಲಕ ಪ್ರಗ್ನಾನಂದ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನಂ.1 ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ.

ನೆದರ್ಲ್ಯಾಂಡ್ ವಿಜ್ಕ್ ಆನ್ ಜೀನಲ್ಲಿ ಮಂಗಳವಾರ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಭಾರತದ ಚೆಸ್ ಮಾಂತ್ರಿಕ  ಪ್ರಗ್ನಾನಂದ ಅವರು ವಿಶ್ವ ಚೆಸ್ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿದರು. ಇದು 2024 ರ ಮೊದಲ ಸೂಪರ್ ಟೂರ್ನಮೆಂಟ್ ಆಗಿತ್ತು.

ಗೆಲುವಿನ ಕುರಿತು ಮಾತನಾಡಿರುವ ಪ್ರಗ್ನಾನಂದ, ಯಾವುದೇ ದಿನ, ನೀವು ಅಂತಹ ಪ್ರಬಲ ಆಟಗಾರನನ್ನು ಸೋಲಿಸಿದರೆ, ಅದು ಯಾವಾಗಲೂ ವಿಶೇಷವಾಗಿರುತ್ತದೆ ಏಕೆಂದರೆ ಅವರನ್ನು ಸೋಲಿಸುವುದು ತುಂಬಾ ಸುಲಭವಲ್ಲ. ಚೆಸ್ನಲ್ಲಿ ವಿಶ್ವ ಚಾಂಪಿಯನ್ ವಿರುದ್ಧ ಮೊದಲ ಬಾರಿಗೆ ಗೆದ್ದಿರುವುದು ಖುಷಿ ಕೊಟ್ಟಿದೆ ಎಂದು ಎಂದು ಅವರು ಹೇಳಿದರು.

“ಇದು ಒಳ್ಳೆಯದು. ಮೊದಲ ಮೂರು ಪಂದ್ಯಗಳು ಸಾಕಷ್ಟು ಆಸಕ್ತಿದಾಯಕವಾಗಿದ್ದವು. ನಾನು ಉತ್ತಮವಾಗಿ ಆಡುತ್ತಿದ್ದೇನೆ ಎಂದು ನಾನು ಭಾವಿಸುತ್ತೇನೆ ಆದರೆ ಕಳೆದ ವರ್ಷವೂ ಇದೇ ರೀತಿ ಆಗಿತ್ತು. ನಾನು ನಿಜವಾಗಿಯೂ ಉತ್ತಮವಾಗಿ ಆಡುತ್ತಿದ್ದ ಒಂದು ಹಂತವಿತ್ತು ಮತ್ತು ನಂತರ ನನ್ನ ಆಟವು ತುಂಬಾ ಕೆಟ್ಟದಾಗಿ ಕುಸಿಯಿತು, ಆದ್ದರಿಂದ ಪಂದ್ಯಾವಳಿಯ ಅಂತ್ಯದವರೆಗೆ ಶಕ್ತಿಯನ್ನು ಹೆಚ್ಚಿಸುವುದು ನಿಜವಾಗಿಯೂ ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
 

SCROLL FOR NEXT