ಶೋಯೆಬ್ ಮಲಿಕ್ ಸನಾ ಜಾವೇದ್ ಜೊತೆಗೆ-ಸಾನಿಯಾ ಮಿರ್ಜಾ 
ಕ್ರೀಡೆ

ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನ ಖಚಿತಪಡಿಸಿದ ಸಾನಿಯಾ ಮಿರ್ಜಾ; ಅವರ ಮುಂದಿನ ಪಯಣಕ್ಕೆ ಶುಭ ಹಾರೈಕೆ!

ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನವನ್ನು ದೃಢಪಡಿಸಿದ ಸಾನಿಯಾ ಮಿರ್ಜಾ, ತನ್ನ ಮಾಜಿ ಪತಿಯ ಮುಂದಿನ ಜೀವನ ಪಯಣಕ್ಕೆ ಶುಭ ಹಾರೈಸಿದ್ದಾರೆ. 

ನವದೆಹಲಿ: ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನವನ್ನು ದೃಢಪಡಿಸಿದ ಸಾನಿಯಾ ಮಿರ್ಜಾ, ತನ್ನ ಮಾಜಿ ಪತಿಯ ಮುಂದಿನ ಜೀವನ ಪಯಣಕ್ಕೆ ಶುಭ ಹಾರೈಸಿದ್ದಾರೆ. 

ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅದೇ ದೇಶದ ಜನಪ್ರಿಯ ನಟಿ ಸನಾ ಜಾವೇದ್ ಜೊತೆಗೆ ವಿವಾಹ ಮಾಡಿಕೊಂಡಿರುವುದಾಗಿ ಘೋಷಿಸಿಕೊಂಡ ನಂತರ, ಭಾರತೀಯ ಟೆನಿಸ್ ಲೋಕದ ಐಕಾನ್ ಮತ್ತು ಶೋಯೆಬ್ ಮಲಿಕ್ ವಿಚ್ಛೇದನ ಪಡೆದಿದ್ದಾರೆ ಎಂದು ಸಾನಿಯಾ ಮಿರ್ಜಾ ಅವರ ಕುಟುಂಬ ಖಚಿತಪಡಿಸಿದೆ.

ಈ ಇಬ್ಬರು ಸೆಲೆಬ್ರಿಟಿಗಳ ವಿವಾಹ 14 ವರ್ಷಗಳ ಹಿಂದೆ ಸುದ್ದಿ ಮಾಡಿದಂತೆ ವಿಚ್ಛೇದನ ಕೂಡ ಭಾರೀ ಸದ್ದು ಮಾಡಿದೆ. 41 ವರ್ಷದ ಮಲಿಕ್ ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ಸನಾ ಅವರೊಂದಿಗಿನ ಮದುವೆಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಸಾನಿಯಾ ಯಾವಾಗಲೂ ತನ್ನ ವೈಯಕ್ತಿಕ ಜೀವನವನ್ನು ಬಹಿರಂಗವಾಗಿ ಮಾತನಾಡದೆ ಆದಷ್ಟು ದೂರವಿಟ್ಟಿದ್ದರು. ಶೋಯೆಬ್ ಮತ್ತು ಸಾನಿಯಾ ಹಲವು ತಿಂಗಳುಗಳ ಹಿಂದೆ ವಿಚ್ಛೇದನ ಪಡೆದಿರುವ ವಿಷಯವನ್ನು ತಿಳಿಸುವ ಅವಶ್ಯಕತೆ ಇಂದು ಸೃಷ್ಟಿಯಾಗಿದೆ. ಶೋಯೆಬ್ ಅವರ ಹೊಸ ಜೀವನ ಪಯಣಕ್ಕೆ ಸಾನಿಯಾ ಮಿರ್ಜಾ ಶುಭ ಹಾರೈಸುತ್ತಾರೆ!," ಎಂದು ಅವರ ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ. 

ಸಾನಿಯಾ ಜೀವನದ ಈ ಸೂಕ್ಷ್ಮ ಅವಧಿಯಲ್ಲಿ, ನಾವು ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ಯಾವುದೇ ಊಹಾಪೋಹಗಳಿಗೆ ಒಳಗಾಗದಂತೆ ಮತ್ತು ಅವರ ಜೀವನದ ಗೌಪ್ಯತೆಯ ಅಗತ್ಯವನ್ನು ಗೌರವಿಸುವಂತೆ ಕೇಳಿಕೊಳ್ಳುತ್ತೇವೆ ಎಂದು ಸಹ ಕುಟುಂಬ ವರ್ಗ ಮನವಿ ಮಾಡಿಕೊಂಡಿದೆ. 

ಸಾನಿಯಾ ಮಿರ್ಜಾ ಹೈದರಾಬಾದ್‌ನಲ್ಲಿ ಏಪ್ರಿಲ್ 2010 ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು. ಮಲಿಕ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 37 ವರ್ಷದ ಸಾನಿಯಾ ಮಿರ್ಜಾ ಅವರನ್ನು ಅನ್‌ಫಾಲೋ ಮಾಡಿದಾಗ ಅವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಕೆಲವು ವರ್ಷಗಳಿಂದ ಕೇಳಿಬರುತ್ತಿದ್ದ ವದಂತಿಗಳಿಗೆ ರೆಕ್ಕೆಪುಕ್ಕ ಸಿಕ್ಕಿತ್ತು.

ಇವರಿಗೆ ಐದು ವರ್ಷದ ಇಜಾನ್ ಎಂಬ ಮಗನಿದ್ದು, ಪ್ರಸ್ತುತ ಮಗು ತಾಯಿ ಸಾನಿಯಾ ಮಿರ್ಜಾ ಅವರೊಂದಿಗೆ ವಾಸವಾಗಿದೆ.  ಶೋಯೆಬ್ ಮಲಿಕ್ ವಿವಾಹದ ಘೋಷಣೆ ಮಾಡಿದ ಒಂದು ದಿನಕ್ಕೆ ಮೊದಲು ಸಾನಿಯಾ ಮಿರ್ಜಾ ಬೇಸರದ ಸಂಗತಿಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. 

"ಮದುವೆ ಕಷ್ಟ, ವಿಚ್ಛೇದನ ಕಷ್ಟ. ನಿಮ್ಮ ಕಷ್ಟವನ್ನು ಆರಿಸಿ. ಸ್ಥೂಲಕಾಯತೆ ಕಷ್ಟ. ಫಿಟ್ ಆಗಿರುವುದು ಕಷ್ಟ, ನಿಮ್ಮ ಕಷ್ಟವನ್ನು ಆರಿಸಿಕೊಳ್ಳಿ. ಸಾಲದಲ್ಲಿರುವುದು ಕಷ್ಟ. ಆರ್ಥಿಕವಾಗಿ ಶಿಸ್ತಿನಲ್ಲಿರುವುದು ಕಷ್ಟ. ನಿಮ್ಮ ಕಷ್ಟವನ್ನು ಆರಿಸಿಕೊಳ್ಳಿ,  ಯಾವುದೇ ಸಂವಹನ ಕಷ್ಟ. ಜೀವನವು ಎಂದಿಗೂ ಸುಲಭವಾಗುವುದಿಲ್ಲ. ನಾನು ಯಾವಾಗಲೂ ಕಠಿಣವಾಗಿರುತ್ತೇನೆ. ಆದರೆ ನಾವು ನಮ್ಮ ಕಷ್ಟವನ್ನು ಆರಿಸಿಕೊಳ್ಳಬಹುದು. ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ ಎಂದು ಸಾನಿಯಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. 

ಭಾರತದ ಶ್ರೇಷ್ಠ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟ ಸಾನಿಯಾ ಎರಡು ದಶಕಗಳ ಕಾಲದ ಸುಪ್ರಸಿದ್ಧ ವೃತ್ತಿಜೀವನದ ನಂತರ ಕಳೆದ ವರ್ಷ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದರು. ಅವರು ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಸ್ಪರ್ಧೆಗಳಲ್ಲಿ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT