ಸಾಂದರ್ಭಿಕ ಚಿತ್ರ 
ಕ್ರೀಡೆ

38ನೇ ನ್ಯಾಷನಲ್​ ಗೇಮ್ಸ್​: 8 ಪದಕ ವಿಜೇತರು ಸೇರಿ 11 ಕ್ರೀಡಾಪಟುಗಳಲ್ಲಿ ಉದ್ದೀಪನ ಮದ್ದು ಸೇವನೆ ದೃಢ

ಹನ್ನೊಂದು ಕ್ರೀಡಾಪಟುಗಳಲ್ಲಿ ಎಂಟು ಕ್ರೀಡಾಪಟುಗಳು ಪದಕ ವಿಜೇತರಾಗಿದ್ದಾರೆ. ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಪಂಜಾಬ್‌ ನಿಂದ ವರದಿಯಾಗಿವೆ.

ಡೆಹ್ರಾಡೂನ್: ಇತ್ತೀಚೆಗೆ ಉತ್ತರಾಖಂಡದಲ್ಲಿ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಹನ್ನೊಂದು ಕ್ರೀಡಾಪಟುಗಳಿಗೆ ನಿಷೇಧಿತ ಉದ್ದೀಪನ ಮದ್ದು ಸೇವನೆಯಲ್ಲಿ ಪಾಸಿಟಿವ್ ದೃಢಪಟ್ಟಿದೆ.

ಹನ್ನೊಂದು ಕ್ರೀಡಾಪಟುಗಳಲ್ಲಿ ಎಂಟು ಕ್ರೀಡಾಪಟುಗಳು ಪದಕ ವಿಜೇತರಾಗಿದ್ದಾರೆ. ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಪಂಜಾಬ್‌ ನಿಂದ ವರದಿಯಾಗಿದ್ದು, ಆರು ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವನೆ ಮಾಡಿದ್ದಾರೆ.

ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ(ನಾಡಾ) ನಿಷೇಧಿತ ಕಾರ್ಯಕ್ಷಮತೆ ಹೆಚ್ಚಿಸುವ ಔಷಧಿಗಳನ್ನು ಸೇವಿಸುವ ಮೂಲಕ ಡೋಪಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ 11 ಕ್ರೀಡಾಪಟುಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

ವಿಶ್ವಾಸಾರ್ಹ ಮೂಲದ ಪ್ರಕಾರ, ಪಂಜಾಬ್‌ನ ಪ್ರಮುಖ ಬ್ಯಾಸ್ಕೆಟ್‌ಬಾಲ್ ಆಟಗಾರ ಅಮೃತ್‌ಪಾಲ್ ಸಿಂಗ್ ಅಮಾನತುಗೊಂಡವರಲ್ಲಿ ಸೇರಿದ್ದಾರೆ. ಆಸ್ಟ್ರೇಲಿಯಾ ಮತ್ತು ಜಪಾನ್‌ನಲ್ಲಿ ಪ್ರತಿಷ್ಠಿತ ಲೀಗ್‌ಗಳ ಅನುಭವಿ ಆಟಗಾರ ಅಮೃತ್‌ಪಾಲ್ ಅವರು ಎರಡನೇ ಬಾರಿ ಡೋಪಿಂಗ್ ಉಲ್ಲಂಘನೆ ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಈ ವರ್ಷ ಜನವರಿ 28 ರಿಂದ ಫೆಬ್ರವರಿ 14 ರವರೆಗೆ ಉತ್ತರಾಖಂಡದಲ್ಲಿ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅಮೃತ್‌ಪಾಲ್ ಪಂಜಾಬ್‌ಗೆ ಚಿನ್ನದ ಪದಕ ಗೆದ್ದಿದ್ದರು.

ಶಿಸ್ತು ಸಮಿತಿಯ ಮೂಲಗಳ ಪ್ರಕಾರ, ಅಮೃತ್‌ಪಾಲ್ ಅವರು ತಾವು ಉದ್ದೀಪನ ಮದ್ದು ಸೇವಿಸಿಲ್ಲ ಎಂದು ಸಾಬೀತುಪಡಿಸಲು ವಿಫಲವಾದರೆ ಎಂಟು ವರ್ಷಗಳವರೆಗೆ ನಿಷೇಧ ಎದುರಿಸಬೇಕಾಗುತ್ತದೆ.

ವರದಿಗಳ ಪ್ರಕಾರ, ಅಮೃತ್‌ಪಾಲ್ ಅವರಿಗೆ 2020 ರಲ್ಲಿ ಡೋಪಿಂಗ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಮೋದಿಯವರು ಅವಮಾನ ಸಹಿಸುವುದಿಲ್ಲ, ಅವರು ಬುದ್ಧಿವಂತ ನಾಯಕ, ತಲೆಬಾಗಿಕೊಂಡು ಹೋಗುವವರಲ್ಲ': US tariffs ಮಧ್ಯೆ ಪುಟಿನ್ ಪ್ರಶಂಸೆ ಮಾತು!

ರಾಜ್ಯಕ್ಕೆ 3,705 ಕೋಟಿ ರೂ. ತೆರಿಗೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ..!

ಪೇಸ್‌ಮೇಕರ್‌ ಅಳವಡಿಕೆ ಯಶಸ್ವಿ: ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ಸ್ಥಿರ, ಆಸ್ಪತ್ರೆಯಿಂದ ಡಿಸ್‌ಚಾರ್ಜ್

Karur stampede: ನಟ ಮತ್ತು ಟಿವಿಕೆ ಅಧ್ಯಕ್ಷ ವಿಜಯ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

Karnataka Rains- ಬೆಂಗಳೂರು ಸೇರಿ ರಾಜ್ಯಾದ್ಯಂತ ಅ.9ರವರೆಗೆ ಮಳೆ

SCROLL FOR NEXT